ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರ್ಗಿ: ಒಂದೇ ಗ್ರಾಮದ ಮೂವರು ಬಾಲಕಿಯರ ಸಾವು

ಕಲಬುರ್ಗಿ : ಜ್ವರದಿಂದ ಬಳಲಿ ಒಂದೇ ಗ್ರಾಮದ ಮೂವರು ಬಾಲಕಿಯರು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಆನೂರ ಗ್ರಾಮದಲ್ಲಿ ನಡೆದಿದೆ.

ಕೇವಲ 15 ದಿನದ ಅಂತರದಲ್ಲಿ ಮೂರು ಜನ ಬಾಲಕೀಯರ ಸಾವಿಗಿಡಾಗಿದ್ದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಗ್ರಾಮಸ್ಥರಲ್ಲಿ ಆತಂಕ ಕೂಡಾ ಹೆಚ್ಚಾಗಿದೆ.

ಇನ್ನು ಮೃತ ಮೂರು ಬಾಲಕಿಯರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಸದ್ಯ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಮಪ್ಪಿದ್ದಾರೆ.

ಸದ್ಯ ಹಲವು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಆನೂರು ಗ್ರಾಮಕ್ಕೆ ಕಲುಷಿತ ಕುಡಿಯುವ ನೀರು ಪೂರೈಕೆಯಿಂದಲೇ ಮಕ್ಕಳ ಸಾವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಪರ್ಯಾಸ ಎಂದರೆ ಗ್ರಾಮದಲ್ಲಿ ಮೂರು ಮಕ್ಕಳ ಸಾವಾಗಿದ್ರು ಆರೋಗ್ಯ ಇಲಾಖೆ ಇನ್ನು ಎಚ್ಚೆತ್ತುಕೊಂಡಿಲ್ಲ..

Edited By : Manjunath H D
PublicNext

PublicNext

04/10/2021 04:44 pm

Cinque Terre

101.27 K

Cinque Terre

1

ಸಂಬಂಧಿತ ಸುದ್ದಿ