ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣದ ಪಕ್ಕ ಟ್ರೀಟ್ಮೆಂಟ್ ,ಇದು ವಿಕ್ಟೋರಿಯಾ ಕರ್ಮಕಾಂಡ.!

ಬೆಂಗಳೂರು: ನಗರದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾದ ಕರ್ಮಕಾಂಡ ನಿನ್ನೆ ಸಂಜೆ ಬಯಲಾಗಿದೆ.ಆಸ್ಪತ್ರೆಯ ಭಯಾನಕ ಸ್ಥಿತಿ ನೋಡಿದ್ರೆ ಎಂತವರಿಗೂ ಎದೆ ಝಲ್ ಅನ್ನದೇ ಇರಲಾರದು. ಜನ ಸಾಮಾನ್ಯರ ಜೀವ ಅಂದರೆ ಅಷ್ಟೊಂದು ನಿಕೃಷ್ಟನಾ.!? ಆರೋಗ್ಯ ಸಚಿವರೇ ನಿಮ್ಮದೇ ಆಸ್ಪತ್ರೆಯ ಅವ್ಯವಸ್ಥೆಯನ್ನ ಒಮ್ಮೆ ನೋಡಿ.

ಒಂದೇ ಹಾಸಿಗೆಯಲ್ಲಿ ಶವದ ಪಕ್ಕದಲ್ಲೇ ರೋಗಿಗೆ ಟ್ರೀಟ್ಮೆಂಟ್ ಕೊಡ್ತಿರೋ‌ ಆರೋಪ ಈ ಆಸ್ಪತ್ರೆಯ ವಿರುದ್ಧ ಕೇಳಿಬಂದಿದೆ. ಹೌದು ಒಂದು ಬೆಡ್ ನಲ್ಲಿ ಶವದ ಪಕ್ಕದಲ್ಲಿ ಇಬ್ಬರಿಗೆ ಚಿಕಿತ್ಸೆ ಕೊಡುತ್ತಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳನ್ನು ಕೇಳಿದರೆ ಕೊಡುತ್ತಿರುವ ಕಾರಣ ಕೇಳಿದರೆ ಎಂತವರಿಗೂ ಪಿತ್ತ ನೆತ್ತಿಗೇರದಿರದು.

ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಐಸಿಯು ಬೆಡ್ ಇಲ್ಲವಂತೆ, ಇದರಿಂದ ಬಡರೋಗಿಗಳು ಆಂಬ್ಯುಲೆನ್ಸ್ ನಲ್ಲೇ ಜೀವನ್ಮರಣದ ಮಧ್ಯೆ ಹೋರಾಡುವಂತಾಗಿದೆ. ಇಷ್ಟೆಲ್ಲಾ ಆದರೂ ಜನರ ಗೋಳಾಟ ಕೇಳೋರಿಲ್ಲ, ಹೇಳೋಕೆ ಮಾತ್ರ ರಾಜಧಾನಿಯ ಅತಿ ದೊಡ್ಡ ಆಸ್ಪತ್ರೆ ಆದರೆ ಸಾಮಾನ್ಯ ವ್ಯವಸ್ಥೆ ಮರೀಚಿಕೆ ಇಲ್ಲಿ. ಸ್ಟ್ರೆಚರ್ ಇಲ್ಲ,ಐ.ಸಿ.ಯು ಇಲ್ಲ, ರೋಗಿಗಳನ್ನ ಶಿಫ್ಟ್ ಮಾಡುವ ರ್‍ಯಾಂಪೇಜ್ ಗೆ ಇಲ್ಲ ಯಾವುದೇ ಶೆಲ್ಟರ್ ವ್ಯವಸ್ಥೆ, ಆಸ್ಪತ್ರೆ ಮೆಟ್ಟಿಲುಗಳ ಮೇಲೆ ತೆವಳುತ್ತಾ ನನಗೆ ಈ ಆಸ್ಪತ್ರೆ ಬೇಡವೆಂದು ರೋಗಿಯ ಗೋಳಾಟ ಸೇರಿದಂತೆ ಅವ್ಯವಸ್ಥೆಯ ತಾಣವಾಗಿ ಜನರ ಜೀವ ಹಿಂಡುವಂತಾಗಿದೆ ಇಲ್ಲಿನ ಆಸ್ಪತ್ರೆಯ ಪರಿಸ್ಥಿತಿ.

ಆರೋಗ್ಯ ಸಚಿವರು ಈ ಅವ್ಯವಸ್ಥೆಯತ್ತ ಗಮನಹರಿಸಿ ವಿಕ್ಟೋರಿಯಾ ಆಸ್ಪತ್ರೆ ಬಡವರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಿ ಬದಲಾಗುವತ್ತ ಮಹತ್ತರ ಹೆಜ್ಜೆ ಇಡಬೇಕಾಗಿದೆ.

Edited By : Nagesh Gaonkar
PublicNext

PublicNext

16/10/2021 04:48 pm

Cinque Terre

85.35 K

Cinque Terre

9