ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: 15 ದಿನಗಳಲ್ಲೇ ಒಂದೇ ಗ್ರಾಮದ ಮೂವರು ಬಾಲಕಿಯರು ಜ್ವರದಿಂದ ಸಾವು

ಕಲಬುರಗಿ: 15 ದಿನಗಳ ಅಂತರದಲ್ಲಿ ಒಂದೇ ಗ್ರಾಮದ ಮೂವರು ಬಾಲಕಿಯರು ತೀವ್ರ ಜ್ವರದಿಂದ ಬಳಲಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನಡೆದಿದೆ.

ಆನೂರ ಗ್ರಾಮದ ಅನುಶ್ರೀ ಸಿಂಘೆ (11), ಸಂಗಮ್ಮ ತೆಲ್ಲೂರ್ (9) ಹಾಗೂ ಚೈತ್ರಾ (12) ಮೃತ ಬಾಲಕಿಯರು. ಜ್ವರ ಕಾಣಿಸಿಕೊಂಡ ಎರಡ್ಮೂರು ದಿನಗಳಲ್ಲಿ ಸಾವನ್ನಪ್ಪಿದ್ದಾರೆ.

ಈ ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದೇ ರೀತಿ ಜ್ವರದಿಂದ ಇನ್ನೂ ಕೆಲವು ಮಕ್ಕಳು ಬಳಲುತ್ತಿದ್ದಾರೆ. ಈ ಜ್ವರ ಕೇವಲ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಕಣ್ಣೀರು ಇಟ್ಟಿದ್ದಾರೆ.

ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ಹೀಗೆ ಆಗುತ್ತಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Edited By : Vijay Kumar
PublicNext

PublicNext

05/10/2021 10:27 am

Cinque Terre

48.88 K

Cinque Terre

2