ಬೆಂಗಳೂರು: ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಅವರು 'ಕ್ರೀಮ್' ಸಿನಿಮಾ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರ ಕಾಲಿನಿಂದ ರಕ್ತಸ್ರಾವವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಯುಕ್ತಾ, 'ನಾನು ಮಾರ್ಷಲ್ ಕಲಿತಿದ್ದೇನೆ. ಫೈಟಿಂಗ್ ಸೀನ್‌ನಲ್ಲಿ ಡ್ಯೂಪ್ ಬೇಡ ಅಂತ ನಾನೇ ಹೇಳಿದ್ದೆ. ಸ್ಟಂಟ್ಸ್ ನಾನೇ ಮಾಡೋದಾಗಿ ಒಪ್ಪಿಕೊಂಡಿದ್ದೆ. ಇದಕ್ಕೂ ಮುನ್ನ ದೊಡ್ಡ ದೊಡ್ಡ ಸ್ಟಂಟ್ಸ್‌ಗಳನ್ನು ಮಾಡಿದೀನಿ. ಇದೇನು ಹೊಸದಲ್ಲ. ಇದು ಅದೆಲ್ಲಕ್ಕಿಂತ ಚಿಕ್ಕದು. ಕೊಂಚ ಸ್ಲಿಪ್ ಅಗಿ ಹೀಗಾಗಿದೆ. ಚಿಕಿತ್ಸೆ ಪಡೆದು ಒಂದು ತಿಂಗಳು ರೆಸ್ಟ್ ಮಾಡ್ತೀನಿ' ಎಂದಿದ್ದಾರೆ.
PublicNext
28/07/2022 08:02 am