ನಟಿ ಕೀರ್ತಿ ಸುರೇಶ್ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ದಕ್ಷಿಣ ಭಾರತದ ಖ್ಯಾತ ನಟಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ನನಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಲಘು ಲಕ್ಷಣಗಳಿರುವ ಅನುಭವವಾಗುತ್ತಿದೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದೇನೆ. ಸದ್ಯ ನಾನು ಐಸೋಲೇಟ್ ಆಗಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ . ಒಂದು ವೇಳೆ ಲಸಿಕ ಪಡೆದಿಲ್ಲವೆಂದರೆ ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈಗಾಗಲೇ ಟಾಲಿವುಡ್ ನ ಮಹೇಶ್ ಬಾಬು, ತ್ರಿಶಾ, ರಾಜೇಂದ್ರ ಪ್ರಸಾದ್, ನವೀನ್ ಪೋಲಿಸೆಟ್ಟಿ, ಬಂಡ್ಲಗಣೇಶ್, ಮಂಚು ಮನೋಜ್, ಮಂಚು ಲಕ್ಷ್ಮಿ, ಹಿರಿಯ ನಟಿಯರಾದ ಶೋಭನಾ, ಮೀನಾ, ಖುಷ್ಬು ಮತ್ತು ಇತರರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
PublicNext
11/01/2022 07:32 pm