ಚೆನ್ನೈ: ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಟ-ರಾಜಕಾರಣಿ ಕಮಲ್ ಹಾಸನ್ ಕೊವಿಡ್-19 ದೃಢಪಟ್ಟಿದೆ . ಈ ಬಗ್ಗೆ ಕಮಲ್ ಟ್ವೀಟ್ ಮಾಡಿದ್ದಾರೆ.
ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ಕೊವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. ಕಮಲ್ ಹಾಸನ್ ಆಸ್ಪತ್ರೆಯಲ್ಲಿ ಸ್ವತಃ ಐಸೋಲೇಟ್ ಆಗಿದ್ದಾರೆ. “ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ” ಎಲ್ಲರೂ ಕಾಳಜಿ ವಹಿಸುವಂತೆ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ. ಕಮಲ್ ಹಾಸನ್ ಅವರ ಅಭಿಮಾನಿಗಳು ಅವರ ಪೋಸ್ಟ್ ಗೆ ಶೀಘ್ರವಾಗಿ ಗುಣವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೀಗ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿರುವ ನಂತರ ಬಿಗ್ ಬಾಸ್ ತಮಿಳು ಸೀಸನ್ 5 ಅನ್ನು ಯಾರು ನಡೆಸುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ.
PublicNext
22/11/2021 04:17 pm