ಪುತ್ರ ಸುಶಾಂತ್ ಸಿಂಗ್ ನನ್ನು ಕಳೆದುಕೊಂಡು ದುಃಖದಲ್ಲಿದ್ದ ತಂದೆ ಕೆಕೆ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯಾಯಕ್ಕಾಗಿ ಸುಮಾರು 6 ತಿಂಗಳಿಂದ ಕಾಯುತ್ತಿರುವ ಸುಶಾಂತ್ ಸಿಂಗ್ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಹರಿಯಾಣದ ಫರಿದಾಬಾದ್ ನ ಆಸ್ಪತ್ರೆಯಲ್ಲಿ ಕಿಕಿ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಕೆಕೆ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇಬ್ಬರು ಪುತ್ರಿಯರಾದ ಪ್ರಿಯಾಂಕಾ ಮತ್ತು ಮೀತು ಸಿಂಗ್ ತಂದೆಯ ಜೊತೆ ಆಸ್ಪತ್ರೆಯಲ್ಲೇ ಇದ್ದು, ಅಪ್ಪನನ್ನು ನೋಡಿಕೊಳ್ಳುತ್ತಿದ್ದಾರೆ. ಕೆಕೆ ಸಿಂಗ್ ಆಸ್ಪತ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
20/12/2020 03:42 pm