ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಈಗ ಮೇಘನಾ ರಾಜ್ ಹಾಗೂ ಪುತ್ರ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ವರದಿ ಪಾಸಿಟಿವ್ ಬಂದಿದೆ.
ಸೋಂಕು ದೃಢಪಡುತ್ತಿದ್ದಂತೆ ನಟಿ ಪ್ರಮೀಳಾ ಜೋಷಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಮೀಳಾ ಜೋಷಾಯಿ ಎರಡು ದಿನಗಳ ಹಿಂದೆಯೇ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸುಂದರ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮೊದಲು ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ ಸುಂದರ್ ರಾಜ್ ಕುಟುಂಬಕ್ಕೆ ವರದಿ ನೆಗೆಟಿವ್ ಬಂದಿತ್ತು, ಆದರೆ ಈಗ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಮೇಘನಾ ರಾಜ್ ಕುಟುಂಬ ಮಗುವಿನ ತೊಟ್ಟಿಲ ಶಾಸ್ತ್ರ ಸಮಾರಂಭ ಮಾಡಿದ್ದರು. ಕುಟುಂಬದವರು ಮತ್ತು ಸ್ನೇಹಿತರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಮೇಘನಾ ರಾಜ್ ಮೈದುನ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಸೋಂಕಿನಿಂದ ಚೇತರಿಸಿಕೊಂಡಿದ್ದರು.
PublicNext
08/12/2020 12:09 pm