ನವದೆಹಲಿ: ಪ್ರಸ್ತುತದ ಒತ್ತಡದ ಜೀವನ ಶೈಲಿ ಆಹಾರದ ಗುಣಮಟ್ಟದಿಂದಾಗಿ ಎಲ್ಲರಿಗೂ ಬೊಜ್ಜು ಬೆಳೆಯುವುದು ಸಾಮಾನ್ಯ ಎನ್ನುವಂತಾಗಿದೆ. ಸದ್ಯ ಫಿಟ್ ನೆಸ್ ಚ್ಯಾಲೆಂಜ್ ಕಂಪನಿಯೊಂದರ ಸಿಇಒ ತನ್ನ ಉದ್ಯೋಗಿಗಳಿಗೆ ಸೂಪರ್ ಆಫರ್ ವೊಂದನ್ನು ನೀಡಿದ್ದಾರೆ. ತೂಕ ಇಳಿಸಿಕೊಳ್ಳಿ ಹಾಗೂ 10 ಲಕ್ಷ ರೂ. ಯನ್ನು ಬಹುಮಾನವಾಗಿ ಗೆಲ್ಲಿ ಎಂದಿದ್ದಾರೆ.
ಹೌದು, ಆನ್ ಲೈನ್ ಬ್ರೋಕರೇಜ್ ಕಂಪನಿ Zerodha ತನ್ನ ಉದ್ಯೋಗಿಗಳಿಗೆ ಹೊಸ ಫಿಟ್ ನೆಸ್ ಸವಾಲನ್ನು ನೀಡಿದೆ. ಕಂಪನಿಯ ಸಿಇಒ ನಿತಿನ್ ಕಾಮತ್, ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಾತ್ರವಲ್ಲದೇ ಒಬ್ಬ ಅದೃಷ್ಟಶಾಲಿ ಉದ್ಯೋಗಿ 10 ಲಕ್ಷ ರೂ. ಬಹುಮಾನವನ್ನು ಎಂದಿದ್ದಾರೆ.
ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ಇದರಿಂದ ಅವರು ಹೆಚ್ಚು ಸಕ್ರಿಯರಾಗದೇ ಇರಲು ಕಾರಣವಾಗಿದೆ. ಇದೀಗ ನಾವು ನಮ್ಮ ಉದ್ಯೋಗಿಗಳನ್ನು ಆಶಾದಾಯಕವಾದ ಮಾರ್ಗದಿಂದ ಸಕ್ರಿಯರನ್ನಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ನಿತಿನ್ ಕಾಮತ್ ತಿಳಿಸಿದ್ದಾರೆ.
PublicNext
25/09/2022 09:15 pm