ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರೀನಾ, ಅಮೃತಾ, ಕರಣ್ ಜೋಹರ್ ಅಪಾರ್ಟ್‌ಮೆಂಟ್‌ ಸೀಲ್‌ಡೌನ್

ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್​ ಮತ್ತು ಅವರ ಸೇಹಿತೆ ಅಮೃತಾ ಅರೋರಾಗೆ ಕೋವಿಡ್​ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇನ್ನಿಬ್ಬರಿಗೂ ಕೊರೊನಾ ಧೃಡಪಟ್ಟಿದೆ. ಇದರಿಂದಾಗಿ ಕರೀನಾ ಕಪೂರ್, ಅಮೃತಾ ಅರೋರಾ ಅವರಿದ್ದ ಅಪಾರ್ಟ್‌ಮೆಂಟ್ ಸೇರಿದಂತೆ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಬೃಹನ್ ಮುಂಬೈ ಕಾರ್ಪೊರೇಷನ್ (ಬಿಎಂಸಿ) ಸೀಲ್‌ಡೌನ್ ಮಾಡಿದೆ.

ಕರೀನಾಗೆ ಸೋಂಕು ಕಾಣಿಸಿಕೊಂಡ ಹಿನ್ನಲೆ ಅವರ ಸಂಪರ್ಕದಲ್ಲಿದವರನ್ನು ಕೋವಿಡ್​ ತಪಾಸಣೆಗೆ ಒಳಪಡಿಸಿದಾಗ ಮೃತಾ ಅರೋರಾ, ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ಗೆ ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ಕರೀನಾ ಮತ್ತು ಅಮೃತಾ ಕರಣ್​ ಜೋಹಾರ್​ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಕರೀನಾ ಕಪೂರ್​ ಅಮೃತಾ ಅರೋರಾ ಅವರಿಗೆ ಡಿ.11ರಂದು ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಸದ್ಯ ಅವರನ್ನು ಹೋಮ್​ ಐಸೋಲೇಷನ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ನಟಿ ಕರೀನಾ ಸಂಪರ್ಕದಲ್ಲಿದ್ದ ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ ಗೂ ಸೋಂಕು ಕಾಣಿಸಿಕೊಂಡಿದೆ.

ಕರೀನಾ ಮತ್ತು ಅಮೃತಾ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಅಪಾರ್ಟ್‌ಮೆಂಟ್‌ಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಕರಣ್ ಜೋಹರ್ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಅವರ ರಿಪೋರ್ಟ್ ನೆಗಟಿವ್ ಬಂದಿದೆ.

Edited By : Vijay Kumar
PublicNext

PublicNext

14/12/2021 10:47 pm

Cinque Terre

69.05 K

Cinque Terre

2