ಹಾವೇರಿ: ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಉತ್ತರ ನೀಡಬೇಕು. ಯಾವಾಗ ಮೀಸಲಾತಿ ನೀಡುತ್ತೆವೆಂದು ನಿರ್ಧಿಷ್ಟ ಸಮಯವನ್ನು ಹಾಗೂ ದಿನಾಂಕ ಕೊಡಬೇಕು ಅಲ್ಲಿಯವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶಿಗ್ಗಾಂವದಲ್ಲಿ ಸಿಎಂ ಮನೆ ಮುತ್ತಿಗೆ ಹೋರಾಟಕ್ಕೆ ಚಾಲನೆ ವೇಳೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಅಧಿವೇಶನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ ಪ್ರಶ್ನೆಗೆ ಸಿಎಂ ಉತ್ತರ ನೀಡಬೇಕು. ಯಾವಾಗ ಮೀಸಲಾತಿ ನೀಡುತ್ತೆವೆಂದು ಭರವಸೆ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬಸನಗೌಡ ಪಾಟೀಲ್ ಯತ್ನಾಳ ರಿಂದ ನಮಗೆ ಸಂದೇಶ ಬರಬೇಕು. ಇಲ್ಲವಾದರೆ ಆಕ್ಟೋಬರ್-ನವೆಂಬರ್‌ನಲ್ಲಿ ಉಗ್ರವಾದ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೇ ವಿಧಾನಸೌದಕ್ಕೆ ಮುತ್ತಿಗೆ ಹಾಕುತ್ತೆವೆ. ನಮ್ಮ ಸಮಾಜದ ಶಕ್ತಿ ಏನೂ ಎಂಬುದು ಅವತ್ತು ತೋರಿಸುತ್ತೆವೆ. ಈಗಾಗಲೇ ನಮ್ಮ ಸಮಾಜದ ಶಕ್ತಿ ಯಡಿಯೂರಪ್ಪನವರಿಗೆ ಗೊತ್ತಾಗಿದೆ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡದ ಕಾರಣ ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.
PublicNext
20/09/2022 03:11 pm