ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ದಲಿತ ಸಿಎಂ ಚರ್ಚೆ ಸದ್ಯ ಇಲ್ಲ

ಹಾವೇರಿ : ಸಿಎಂ ಸಿದ್ದರಾಮಯ್ಯ ಇರುವವರೆಗೆ ದಲಿತ ಸಿಎಂ ಬಗ್ಗೆ ಯಾವುದೇ ನಿರ್ಧಾರ ಆಗಲ್ಲ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರೈಸಿದ ನಂತರ ಸಮಯ ಬಂದಾಗ ಅದಕ್ಕೆ ಮಹತ್ವ ಇರುತ್ತೆ ಎಂದು ತಿಳಿಸಿದರು. ದಲಿತ ಸಿಎಂ ಹೈಪ್ ಮಾಡೋದ್ರಲ್ಲಿ ಅರ್ಥ ಇಲ್ಲ ಎಂದು ಶಿವಾನಂದ ಪಾಟೀಲ್ ತಿಳಿಸಿದರು.

ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರ ಕುರಿತಂತೆ ಮಾತನಾಡಿದ ಅವರು ಅದರಲ್ಲೇನು ವಿಶೇಷವಿದೆ ಎಂದು ತಿಳಿಸಿದರು. ನಮ್ಮಲ್ಲಿ ಕೆಲವರಿಗೆ ದೆಹಲಿಗೆ ಹೋಗೋ ಚಟ ಇದೆ

ಹೋಗೋದು ಬರೋದು ಚಟ ಇದೆ. ಕೆಲವರು ಬಹಳ ಸಾಂದರ್ಭಿಕವಾಗಿ ಹೋಗ್ತಿರ್ತಾರೆ ನನಗೆ ಆ ಚಟ ಇಲ್ಲ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವದು ಬೇಡ ಎಂದು ತಿಳಿಸಿದರು.

ಮೂಡಾ ಸೈಟ್ ವಿಚಾರವಾಗಿ ಜಿಟಿಡಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಗೆ ಹೆಚ್ ಡಿ ಕೆ ಆಕ್ರೋಶ ವಿಚಾರ ಕುರಿತಂತೆ ಮಾತನಾಡಿದ ಸಚಿವ ಶಿವಾನಂದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಬೇವಿನಕಾಯಿ ಯಾವುದು ಹಾಗಲಕಾಯಿ ಯಾವುದು ಅನ್ನೋದು ಇಷ್ಟು ತಡ ಆಗಿ ಯಾಕೆ ಗೊತ್ತಾಯಿತು ಎಂದು ವ್ಯಂಗ್ಯವಾಡಿದರು.

Edited By : Vinayak Patil
PublicNext

PublicNext

05/10/2024 05:32 pm

Cinque Terre

16.07 K

Cinque Terre

0

ಸಂಬಂಧಿತ ಸುದ್ದಿ