ಹಾವೇರಿ: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ರಾಜೀನಾಮೆ ನೀಡುವುದಾದರೇ ಎಫ್ಐಆರ್ ಆದವರೆಲ್ಲಾ ರಾಜೀನಾಮೆ ನೀಡಿ ಎಂದು ಹೇಳಿಕೆ ನೀಡಿದ್ದು ಅವರು ಸಿಎಂ ಸಿದ್ದರಾಮಯ್ಯ ಪರ ಇದ್ದಾರೆ ಅಂತಾ ಅಲ್ಲಾ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಆಲ್ಕೋಡ್ ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಜಿ.ಟಿ.ದೇವೇಗೌಡ ಈ ರೀತಿ ಹೇಳಿಕೆ ನೀಡಿದ್ದಾರೆ ಅಂದರೆ ಅವರು ಕುಮಾರಸ್ವಾಮಿ ವಿರುದ್ದ ಹೇಳಿಕೆ ನೀಡಿದ್ದಾರೆ ಅಂತಾ ಅಲ್ಲಾ ಎಂದು ತಿಳಿಸಿದರು.
ಎಲ್ಲ ಪಕ್ಷದಲ್ಲಿ ಕೇಸ ಇದ್ದವರು ಇದ್ದಾರೆ ಅವರೆಲ್ಲಾ ರಾಜೀನಾಮೆ ನೀಡಲಿ ಎನ್ನುವ ಅರ್ಥದಲ್ಲಿ ಇವರು ಹೇಳಿದ್ದಾರೆ ಎಂದು ಆಲ್ಕೋಡ್ ತಿಳಿಸಿದರು. .ಜಿ.ಟಿ.ದೇವೇಗೌಡ ನಮ್ಮ ಪಕ್ಷದ ಮುಖಂಡರು ಕೋರ್ ಕಮಿಟಿ ಅಧ್ಯಕ್ಷರು ಎಂದು ತಿಳಿಸಿದರು.
ಕೇವಲ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಅಷ್ಟೇ ಅಲ್ಲಾ ಎಫ್ಐಆರ್ ಆದವರು ಎಲ್ಲ ಪಕ್ಷದಲ್ಲಿದ್ದಾರೆ ಎಲ್ಲರೂ ರಾಜೀನಾಮೆ ಕೊಡಲಿ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ಆಲ್ಕೋಡ್ ಹನುಮಂತಪ್ಪ ತಿಳಿಸಿದರು.
ಇದೇ ವೇಳೆ ಎಡಿಜಿಪಿ ಚಂದ್ರಶೇಖರ್ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಲ್ಕೋಡ್ ಹನುಮಂತಪ್ಪ ಆಡಳಿತ ಎಷ್ಟು ಹದಗೆಟ್ಟು ಹೋಗಿದೆ ಎಂದು ಅವರು ಹೇಳಿಕೆಯೊಂದೇ ಸಾಕ್ಷಿ ಎಂದು ಆರೋಪಿಸಿದರು. ಆಡಳಿತ ಮೇಲೆ ಸರ್ಕಾರದ ಹಿಡಿತವಿಲ್ಲಾ ಎಂಬುದಕ್ಕೆ ಚಂದ್ರಶೇಖರ್ ಮಾತುಗಳೇ ಸಾಕ್ಷಿ ಎಂದು ಆಲ್ಕೋಡ್ ಆರೋಪಿಸಿದರು. ನನ್ನ 30 ವರ್ಷದ ರಾಜಕಾರಣದಲ್ಲಿ ಯಾವ ಅಧಿಕಾರಿಗಳು ಶಾಸಕರ ಹಕ್ಕುಭಾದ್ಯತೆಗಳಿಗೆ ಧಕ್ಕೆ ತಂದಿಲ್ಲಾ ಎಂದು ಆಲ್ಕೋಡ್ ಹನುಮಂತಪ್ಪ ತಿಳಿಸಿದರು.
Kshetra Samachara
04/10/2024 09:09 pm