ಹಾವೇರಿ : ಆಕೆ ನಿಜಕ್ಕೂ ಸಾಕಷ್ಟು ಕಷ್ಟದ ಜೀವನವನ್ನು ಕಣ್ಣಾರೆ ಕಂಡಿರುವ ಮಹಾತಾಯಿ. ಕುಳಿತು ತಿನ್ನುವಷ್ಟು ಆಸ್ತಿಪಾಸ್ತಿ ಇದ್ದರೂ ಈಗ ದಯಾಮರಣಕ್ಕಾಗಿ ಮನವಿ ಮಾಡಿದ್ದಾಳೆ. ಆಯುಷ್ಯ ಗಟ್ಟಿ ಇದ್ದರೂ ಸಾಯಲು ಹೊರಟಿರುವ 78ರ ವಯೋ ವೃದ್ಧೆಯ ಕಣ್ಣೀರ ಕಹಾನಿ ಇಲ್ಲಿದೆ ನೋಡಿ.
ಹೀಗೆ ಕೈಯಲ್ಲಿ ದಯಾಮರಣ ಕೋರಿ ಪತ್ರ ಹಿಡಿದಿರುವ ವೃದ್ಧೆ. ಮಕ್ಕಳನ್ನು ನೆನೆದು ಕಣ್ಣೀರು ಹಾಕುತ್ತಿರುವ ತಾಯಿ. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೊಟ್ಟೂರು. ಹೌದು.ಹೆತ್ತ ಮಕ್ಕಳಿಂದಲೇ ರೋಸಿಹೋದ ವೃದ್ಧೆ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾಳೆ.
78 ವರ್ಷದ ಕೊಟ್ಟೂರು ರಾಣೆಬೆನ್ನೂರು ನಗರದ ನಿವಾಸಿ ಪುಟ್ಟವ್ವ, ನನ್ನ ಯಜಮಾನನಿಗೆ ಸೇರಬೇಕಾದ ಆಸ್ತಿಯನ್ನು ನನಗೆ ಕೊಟ್ಟುಬಿಡಿ ಎಂದು ಮಕ್ಕಳನ್ನ ಅಂಗಲಾಚುತ್ತಿದ್ದಾಳೆ. ಮಕ್ಕಳಿಂದ ಬೇಸತ್ತು ಇಂದು ಜಿಲ್ಲಾಧಿಕಾರಿ ಭೇಟಿಗೆ ಬಂದ ವೃದ್ಧೆ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲಮೇಲೆ ಕುಳಿತು ಕಣ್ಣಿರಿಟ್ಟಿದ್ದಾಳೆ.
78 ವರ್ಷದ ಪುಟ್ಟವ್ವನಿಗೆ ಹನ್ನೊಂದು ಮಕ್ಕಳು, ಹನ್ನೊಂದು ಮಕ್ಕಳ ಪೈಕಿ ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲು ಮುಂದಾದ ವೃದ್ಧೆ, ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾಳೆ. 25 ಎಕರೆ ಜಮೀನು, 07 ಮನೆಗಳು ಇದ್ದರೂ ಮಕ್ಕಳಿಂದ ನೆಮ್ಮದಿ ಇಲ್ಲವಾಗಿದೆ. ನನಗೆ ಜೀವನವೇ ಸಾಕಾಗಿದೆ ಎಂದು ದಯಾಮರಣಕ್ಕೆ ಅರ್ಜಿ ಹಾಕಿದ್ದಾಳೆ.
ಗಂಡನ ಹೆಸರಿಗೆ ಇರುವ ಆಸ್ತಿಯನ್ನ ನನ್ನ ಹೆಸರಿಗೆ ಮಾಡಿಕೊಳ್ಳಲು ಬಿಡುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವ ತಾಯಿಯ ಕಣ್ಣೀರು ಒಂದುಕಡೆಯಾದರೇ ಮತ್ತೊಂದು ಕಡೆಯಲ್ಲಿ ಮಕ್ಕಳಿಗೆ ಆಸ್ತಿ ಚಿಂತೆ , ಅಜ್ಜಿಗೆ ಕೊನೆಯ ದಿನಗಳನ್ನ ಕಳೆಯುವುದೇ ಚಿಂತೆಯಾಗಿದೆ. ಪ್ರತಿನಿತ್ಯ ಕಣ್ಮುಂದೆ ಓಡಾಡಿದರೂ ಈ ವೃದ್ಧೆಯ ಗೋಳು ಕೇಳುವವರು ಇಲ್ಲದಂತಾಗಿದೆ.
PublicNext
23/09/2022 09:01 pm