ಹಾವೇರಿ : ಸೈನ್ಯದಲ್ಲಿ ಕೆಲಸ ನಿರ್ವಹಿಸಿ ದೇಶಕ್ಕಾಗಿ ತನ್ನ ಜೀವವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸಿದ ವೀರ ಯೋಧ ಸುರೇಶಗೌಡ ಗೌಳಿಗೌಡ್ರರಿಗೆ ಹಳೇಮನ್ನಂಗಿ ಗ್ರಾಮದಲ್ಲಿ ಅತ್ಯಂತ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಊರಿನ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದುಕೊಟ್ಟರು. ಹಾಗೂ ಗ್ರಾಮದ ಸಕಲ ಗುರು-ಹಿರಿಯರು, ಹಲವಾರು ಮಠಗಳ ಶ್ರೀಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ರು.
ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವಿಶೇಷವಾಗಿ ಪ್ರಸಾದ ವ್ಯವಸ್ಥೆಯನ್ನು ಮಂಜುನಾಥ ಹಾಗೂ ರಾಜೇಶ್ವರಿ, ಪವಾಡಿ ದಂಪತಿ ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
PublicNext
05/10/2024 03:22 pm