ಹಾವೇರಿ: ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು ರಸ್ತೆಯ ಮೇಲೆ ಚೆಲ್ಲಿದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಯುವಕರು ಮುಂದಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ಲಾರಿ - ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ೪೮ ರ ರಸ್ತೆ ವಿಭಜಕದ ಗಿಡಗಳಿಗೆ ನೀರು ಹಾಕುತ್ತಿದ್ದ ಟ್ರ್ಯಾಕ್ಟರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಚಾಲಕನನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ರೂಡ್ ಆಯಿಲ್ ತುಂಬಿಕೊಂಡು ಬೆಂಗಳೂರಿನ ಕಡೆಗೆ ಲಾರಿ ಸಾಗುತ್ತಿತ್ತು. ರಸ್ತೆಯಲ್ಲಿನ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿನ ಬ್ಯಾರೆಲ್ ಒಡೆದು ಕ್ರೂಡ್ ಆಯಿಲ್ ಚೆಲ್ಲಿದೆ. ಬ್ಯಾರಲ್ ನಲ್ಲಿ ತುಂಬಿದ ಕ್ರೂಡ್ ಆಯಿಲ್ ನೀರಿನಂತೆ ರಸ್ತೆಯಲ್ಲಿ ಹರಿದಿದೆ. ಇದನ್ನು ನೋಡಿದ ದಾರಿಹೋಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಬಿದ್ದ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದರು.
PublicNext
21/01/2025 07:20 pm