ಹಾವೇರಿ: ಸಾರಿಗೆ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಹಾವೇರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಹುಬ್ಬಳ್ಳಿಯಿಂದ ಹಾವೇರಿಗೆ ಬರುತ್ತಿದ್ದ ಬಸ್‌ನ ಹಿಂದಿನ ನಾಲ್ಕು ಚಕ್ರಗಳು ಬೇರ್ಪಟ್ಟ ಘಟನೆ ನಡೆದಿದೆ. ಕೆಎ 25 ಎಫ್ 3164 ಸಂಖ್ಯೆಯ ಬಸ್ ನಾಗನೂರ್ ಕ್ರಾಸ್ ಬಳಿ ಚಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸುಮಾರು 40 ಜನರು ಪ್ರಯಾಣ ಮಾಡುತ್ತಿದ್ದ ಬಸ್ ಒಮ್ಮಿದೊಮ್ಮಿಲೇ ಹಿಂದಿನ ನಾಲ್ಕು ಚಕ್ರ ಕಳಚುತ್ತಿದ್ದಂತೆ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅವಘಡವಾಗದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ.
ಚಾಲಕನ ಚಾಕಚಕ್ಯತೆಯಿಂದ ಬಸ್ ನಿಂತಿದ್ದು ಪ್ರಯಾಣಿರು ಸುರಕ್ಷಿತರಾಗಿದ್ದಾರೆ. ಕಲ್ಲಪ್ಪ ಸುಳದ ಎಂಬ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಘಾತವಾಗಿಲ್ಲ. ಸ್ವಲ್ಪ ಗಾಯಗೊಂಡಿದ್ದ ಓರ್ವ ಪ್ರಯಾಣಿಕನಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
PublicNext
03/10/2024 07:00 pm