ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸಿಡಿಲು ಬಡಿದು ರೈತ ಸಾವು; ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಕಲಬುರಗಿ: ಕಳೆದ ಸೆ.26 ರಂದು ಕೃಷಿ ಕೆಲಸ‌ ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದ ಕಲಬುರಗಿ ತಾಲೂಕಿನ ಕಲ್ಲಬೇನೂರು ಗ್ರಾಮದ ರೈತ ಮಹಾದೇವಪ್ಪ ಸಿಡಿಲಿಗೆ ಸಾವನಪ್ಪಿದ ಹಿನ್ನೆಲೆಯಲ್ಲಿ ನೈಸರ್ಗಿಕ ವಿಕೋಪ ಪರಿಹಾರದಡಿ ಶನಿವಾರ ಗ್ರಾಮಕ್ಕೆ ತೆರಳಿದ ಶಾಸಕ ಬಸವರಾಜ ಮತ್ತಿಮೂಡ ಅವರು‌ 5 ಲಕ್ಷ‌ ರೂ. ಪರಿಹಾರದ ಚೆಕ್ ಅವರ ಪತ್ನಿಗೆ ವಿತರಿಸಿದರು.

ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು, ಸರ್ಕಾರದಿಂದ‌ ಸಿಗಬಹುದಾದ ಎಲ್ಲಾ ಸೌಲಭ್ಯ ನೀಡಲಾಗುವುದು. ಧೈರ್ಯದಿಂದಿರಿ ಎಂದು ಆತ್ಮಸ್ಥೈರ್ಯ ತುಂಬಿದರು.

Edited By : Vijay Kumar
Kshetra Samachara

Kshetra Samachara

01/10/2022 11:06 pm

Cinque Terre

1.68 K

Cinque Terre

0