ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ನಿಯಮ ಉಲ್ಲಂಘನೆ; ಗುತ್ತಿಗೆ ರದ್ದುಪಡಿಸಿ, 4 ಎಕರೆ ಸರ್ಕಾರಿ ಜಮೀನು ವಾಪಸ್ ಪಡೆಯಲು ಡಿ.ಸಿ ಆದೇಶ

ಕಲಬುರಗಿ: ಗುತ್ತಿಗೆ (ಲೀಸ್) ಪಡೆದು ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಜಮೀನನ್ನು ಇನ್ನೊಬ್ಬರಿಗೆ ಅನಧಿಕೃತವಾಗಿ ಪರಭಾರೆ ಮಾಡಿದ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆ ಇವರಿಂದ 4-00 ಎಕರೆ ಸರ್ಕಾರಿ ಗಾಯರಾಣ ಜಮೀನು ಮರಳಿ ಸರ್ಕಾರಕ್ಕೆ ವಾಪಸ್ ಪಡೆಯಲು ಡಿ.ಸಿ. ಯಶವಂತ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಗೆ ಪ್ರಾದೇಶಿಕ ವಿತರಣಾ ಕೇಂದ್ರ ಸ್ಥಾಪನೆ, ದಾಲ್ ಮಿಲ್ ಹಾಗೂ ಇತರೆ ಗೋಡೌನ್ ನಿರ್ಮಾಣಕ್ಕೆ ಕಲಬುರಗಿ ತಾಲೂಕಿನ ಬಡೇಪೂರ ಗ್ರಾಮದ ಸರ್ಕಾರಿ ಗಾಯರಾಣ ಸರ್ವೇ 84/2 ಮತ್ತು 84/4 ರಲ್ಲಿನ ತಲಾ 2 ಎಕರೆ ಸೇರಿ ಒಟ್ಟು 4 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ದಿ.11-07-1984 ರಂದು ಅಂದಿನ ಕಲಬುರಗಿ ಜಿಲ್ಲಾಧಿಕಾರಿಗಳು ಐದು ಷರತ್ತುಗಳ ವಿಧಿಸಿ ಮಂಜೂರಾತಿ ನೀಡಿದರು

ಈ ಷರತ್ತುಗಳನ್ನು ಉಲ್ಲಂಘಿಸಿದ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಇವರು, ಸರ್ವೆ ನಂ. 84/4 ರಲ್ಲಿನ 2 ಎಕರೆ ಜಮೀನನ್ನು ಜೈ ಭವಾನಿ ಕಲ್ಯಾಣ ಮಂಟಪ ಇವರಿಗೆ ಪರಭಾರೆ ಮಾಡಿ 20 ವರ್ಷದ ಅವಧಿಗೆ ಗುತ್ತಿಗೆ ಕರಾರು ಮಾಡಿಕೊಂಡು ಕಲಬುರಗಿ ಉಪ ನೊಂದಣಾಧಿಕಾರಿಗಳ ಕಚೇರಿ ನೋಂದಣಿ ಮಾಡಿದ್ದಾರೆ. ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಲ್ಯಾಣ ಮಂಟಪ ಎಂದು ಸಹ ನೋಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಸಹಾಯಕ ಆಯುಕ್ತರು ವರದಿ ನೀಡಿದ್ದರು.

ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಗೆ ಗುತ್ತಿಗೆ ಮೇಲೆ ಮಂಜೂರು ಮಾಡಿದ 4 ಎಕರೆ ಜಮೀನಿನ ಗುತ್ತಿಗೆ (ಲೀಸ್) ರದ್ದುಗೊಳಿಸಿ, ಯಾವುದೇ ನೋಟಿಸ್/ ಪರಿಹಾರ ನೀಡದೆ ಮರಳಿ ಕಂದಾಯ ಇಲಾಖೆಗೆ ಜಮೀನು ವಶಕ್ಕೆ ಪಡೆಯುವಂತೆ ಕಲಬುರಗಿ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

05/10/2022 04:58 pm

Cinque Terre

6.98 K

Cinque Terre

0