ಕಲಬುರಗಿ: ಗಾಳಿಯಲ್ಲಿ ಗುಂಡು ಹಾರಿಸಿ ಬನ್ನಿ ಮುಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಲಿಂಗರಾಜಪ್ಪ ಅಪ್ಪ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.. ಆಯುಧ ಪೂಜೆ ದಿನದಂದು ಲಿಂಗರಾಜಪ್ಪ ಅಪ್ಪ ಒಂದು ಬಂದೂಕು ಹಾಗೂ ಒಂದು ಪಿಸ್ತೂಲ್ ಮೂಲಕ ಸುಮಾರು 8 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಬಾರಿ ವೈರಲ್ ಆಗಿತ್ತು. ಸಾಕಷ್ಟು ಪರ ವಿರೋಧ ಚರ್ಚೆಗಳು ಸಹ ಚಾಲ್ತಿಯಲ್ಲಿದ್ದವು. ಇದೀಗ ಪೊಲೀಸರು ನೋಟಿಸ್ ನೀಡಿದ್ದಾರೆ.
ಶಸ್ತ್ರಾಸ್ತ್ರಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಹಿನ್ನಲೆ ದಕ್ಷಿಣ ವಿಭಾಗದ ಪೋಲಿಸ್ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಫೈರ್ ಮಾಡಲಾದ ಗನ್ ಮತ್ತು ಪಿಸ್ತೂಲ್ ಗಳ ಲೈಸೆನ್ಸಿನ ಪ್ರತಿ ಪ್ರಸ್ತುತ ಪಡಿಸುವಂತೆ ಹಾಗೂ ಗುಂಡು ಹಾರಿಸಿದ ವಿವರಣೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
PublicNext
09/10/2022 05:59 pm