ನವದೆಹಲಿ: ಕೇಂದ್ರ ಸರ್ಕಾರವು ಆರ್ಥಿಕ ತಜ್ಞ ವಿ.ಅನಂತ್ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ (ಸಿಇಎ) ಶುಕ್ರವಾರ ನೇಮಕ ಮಾಡಿದೆ.
ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಮತ್ತು ಜೂಲಿಯಸ್ ಬೇರ್ ಗ್ರೂಪ್‌ನ ಶೈಕ್ಷಣಿಕ ಮತ್ತು ಮಾಜಿ ಕಾರ್ಯನಿರ್ವಾಹಕ ವಿ ಅನಂತ ನಾಗೇಶ್ವರನ್ ಇನ್ನು ಮುಂದೆ ಕೇಂದ್ರ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಅನಂತ್ ನಾಗೇಶ್ವರನ್ ಅವರು ಲೇಖಕ, ಪ್ರಾಧ್ಯಾಪಕ ಹಾಗೂ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ವ್ಯಾಪಾರ ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೇ ಅನಂತ್ ನಾಗೇಶ್ವರನ್ ಐಎಫ್‌ಎಂಆರ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ನ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2019ರಿಂದ 2021ರವರೆಗೆ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅರೆಕಾಲಿಕ ಸದಸ್ಯರೂ ಆಗಿದ್ದರು.
PublicNext
29/01/2022 10:30 am