ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಯುಸೇನೆಗೆ ಆನೆ ಬಲ : ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧವಿಮಾನ ಆಗಮನ

ನವದೆಹಲಿ: ಫ್ರಾನ್ಸ್ ನಿಂದ 3ನೇ ಹಂತದಲ್ಲಿ 3 ರಫೇಲ್ ವಿಮಾನಗಳು ಭಾರತಕ್ಕೆ ಬಂದಿವೆ. ಸುಮಾರು 7000 ಕಿ.ಮೀ. ಕ್ರಮಿಸಿ ಬುಧವಾರ ಭಾರತಕ್ಕೆ 3 ರಫೇಲ್ ಜೆಟ್ ಗಳು ಆಗಮಿಸಿವೆ.

ಈ ಕುರಿತು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ. ಚೀನಾ ಭಾರತದ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವಾಗಲೇ ದೇಶದ ವಾಯುಪಡೆಗೆ ಹೊಸ ಬಲ ನೀಡಿದಂತಾಗಿದೆ.

ರಫೇಲ್ ಬಂದ ಬಗ್ಗೆ ವಾಯುಪಡೆ ಟ್ವೀಟ್ ಭಾರತ ಸರ್ಕಾರವು ಒಟ್ಟು 36 ರಫೇಲ್ ಜೆಟ್ ಗಳನ್ನು ತರಿಸಿಕೊಳ್ಳುತ್ತಿದೆ. ಅದರಲ್ಲಿ 5 ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಜುಲೈ 29ರಂದು ಬಂದಿಳಿದಿದ್ದವು. ಈ ಜೆಟ್ ಗಳ ಸೇರ್ಪಡೆಯಿಂದ ಭಾರತದ ವಾಯುಸೇನೆಯ ಬಲ ಇಮ್ಮಡಿಸಿದೆ.

ಮೊದಲ ಹಂತದಲ್ಲಿ ರಫೇಲ್ ಯುದ್ಧವಿಮಾನಗಳು ಅಂಬಾಲಾಗೆ ಬಂದಿಳಿದಾಗ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಾದ ನಂತರ ಮತ್ತೊಂದು ಬ್ಯಾಚ್ ನಲ್ಲಿ ಇನ್ನೂ 3 ರಫೇಲ್ ಜೆಟ್ ಗಳು ಬಂದಿಳಿದಿದ್ದವು. ಇದೀಗ ಮತ್ತೊಂದು ಬ್ಯಾಚ್ ನಲ್ಲಿ 3 ರಫೇಲ್ ವಿಮಾನಗಳು ಬಂದಿವೆ.

Edited By : Nirmala Aralikatti
PublicNext

PublicNext

28/01/2021 11:52 am

Cinque Terre

73.71 K

Cinque Terre

6

ಸಂಬಂಧಿತ ಸುದ್ದಿ