ಬೆಂಗಳೂರು: ಡಿ ರೂಪಾ ಸೇರಿದಂತೆ ವಿವಾದಿತ 8 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಈ ಕುರಿತು ಹೊರಬಿದ್ದಿರುವ ವರ್ಗಾವಣೆ ಆದೇಶದಲ್ಲಿ ಒಟ್ಟು 8 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ರೂಪಾ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿಯೂ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ.
ಕಳೆದ ಶುಕ್ರವಾರ ಪ್ರಾರಂಭವಾದ ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ವಿವಾದಗಳು ನಡೆದು ಸರ್ಕಾರಕ್ಕೆ ಮುಜುಗರವುಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ರಾಜ್ಯ ಸರ್ಕಾರ ಕರಕುಶಲ ನಿಗಮಕ್ಕೆ ವರ್ಗಾವಣೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವರ್ಗಾವಣೆಯಾದ IPS ಅಧಿಕಾರಿಗಳ ಪಟ್ಟಿ
1. ಡಿ.ರೂಪಾ- ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ
2. ಹೇಮಂತ್ ನಿಂಬಾಳ್ಕರ್- ಆಂತರಿಕ ಭದ್ರತೆ ವಿಭಾಗದ ಐಜಿಪಿಯನ್ನಾಗಿ ವರ್ಗ.
3. ಡಾ. ಕೆ ರಾಮಚಂದ್ರರಾವ್ -ಎಡಿಜಿಪಿ, ಮಾನವ ಹಕ್ಕುಗಳು ಮತ್ತು ಕುಂದುಕೊರತೆ ಇಲಾಖೆ
4. ಮಾಲಿನಿ ಕೃಷ್ಣಮೂರ್ತಿ -ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್), ಗೃಹ ಖಾತೆ
5. ಎಂ ಚಂದ್ರಶೇಖರ್ -ಐಜಿ, ಸೆಂಟ್ರಲ್ ರೇಂಜ್-ಬೆಂಗಳೂರು
6. ವಿಫುಲ್ ಕುಮಾರ್ -ನಿರ್ದೇಶಕ, ಪೊಲೀಸ್ ಅಕಾಡೆಮಿ, ಮೈಸೂರು
7. ವಿಕಾಶ್ ಕುಮಾರ್ -ಡಿಐಜಿ, ಕೆ ಎಸ್ ಆರ್ಪಿ, ಬೆಂಗಳೂರು
8.ರಂಜಿತ್ ಕುಮಾರ್-ಮಂಗಳೂರು ಸೌತ್ ನ ಎಸಿಪಿ ಸ್ಥಾನದಿಂದ ಬಟ್ಕಳ ಉಪ ವಿಭಾಗದ ಎಸಿಪಿಯಾಗಿ ನೇಮಕ.
PublicNext
01/01/2021 07:32 am