ನವದೆಹಲಿ : 2021 ರ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗಲು ಫಾಸ್ಟ್ ಟ್ಯಾಗ್ ಗಳನ್ನು 2016ರಲ್ಲಿ ಪರಿಚಯಿಸಲಾಯಿತು.
ಪ್ರಯಾಣಿಕರಿಗೆ ಫಾಸ್ಟ್ ಟ್ಯಾಗ್ ಉಪಯುಕ್ತವಾಗಲಿದೆ ಏಕೆಂದರೆ ನಗದು ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ನಿಲ್ಲಬೇಕಾಗಿಲ್ಲ.
ಸಮಯ ಮತ್ತು ಇಂಧನವನ್ನು ಉಳಿಸಲು ಸಹ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಫಾಸ್ಟ್ಯಾಗ್ ಅನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಈ ವೇಳೆ ನಾಲ್ಕು ಬ್ಯಾಂಕುಗಳು ಒಟ್ಟಾಗಿ ಒಂದು ಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್ ನೀಡಿದ್ದವು.
2017ರ ಹೊತ್ತಿಗೆ ಅದು ಏಳು ಲಕ್ಷಕ್ಕೆ ಏರಿತು.
ಇನ್ನು 2018ರಲ್ಲಿ 34 ಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್ ಗಳನ್ನು ಅಳವಡಿಸಲಾಗಿದೆ.
ಸೆಂಟ್ರಲ್ ಮೋಟಾರು ವಾಹನ ನಿಯಮಗಳ ಪ್ರಕಾರ, 1989, ಡಿಸೆಂಬರ್ 1, 2017ರಿಂದ, ಹೊಸ ನಾಲ್ಕು ಚಕ್ರಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.
PublicNext
24/12/2020 08:51 pm