ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ರಾಜ್ಯವ್ಯಾಪಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ

ಬೆಂಗಳೂರು: ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ತಮ್ಮ ಹಕ್ಕು ಚಲಾಯಿಸಲು ಕಾನೂನು ಬದ್ದವಾಗಿ ಮತದಾರನ ಗುರುತಿನ ಚೀಟಿ ಪಡೆಯಬೇಕು.

ಇದುವರೆಗೂ ಇನ್ನು ಯಾರೆಲ್ಲಾ ನಿಮ್ಮ ಹೆಸರನ್ನಾ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲವೋ ಅಥವಾ ನಿಮ್ಮ ಹೆಸರು ಸೇರ್ಪಡೆ ಮಾಡಲು, ವಿಳಾಸ ಬದಲಾವಣೆ ಸೇರಿದಂತೆ ಇತರ ತಿದ್ದುಪಡಿ ಮಾಡಲು ಬಯಸಿದ್ದರೆ ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

“ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2021’ರ ಅಂಗವಾಗಿ ಮತದಾರರ ಪಟ್ಟಿ ಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ವಿಶೇಷ ಅಭಿಯಾನ ಹಮ್ಮಿ ಕೊಂಡಿದೆ.

ನ. 29, ಡಿ. 6 ಮತ್ತು ಡಿ. 13ರಂದು ರಾಜ್ಯವ್ಯಾಪಿ ಅಭಿಯಾನ ನಡೆಯಲಿದ್ದು, ಆಯಾ ದಿನ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಪ್ರತೀ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ಬದಲಾವಣೆ, ತಿದ್ದುಪಡಿಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

2021ರ ಜ. 1ಕ್ಕೆ 18 ವರ್ಷ ತುಂಬುವ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಗಳನ್ನು ನೋಂದಣಿ ಮಾಡಿಸಿ ಕೊಳ್ಳಬಹುದು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದ ಸಂಬಂಧ ಈಗಾಗಲೇ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮತಗಟ್ಟೆ ಅಧಿಕಾರಿಗಳು ಮನೆಗೆ ಬರುತ್ತಾರೆ ಎಂದು ಕಾದು ಕುಳಿತುಕೊಳ್ಳದೆ ಮತಗಟ್ಟೆ ಕಚೇರಿಗೆ ತೆರಳಿ ಹೆಸರು ನೋಂದಣಿ ಮತ್ತು ಇನ್ನಿತರ ಬದಲಾವಣೆ ಮಾಡಿಕೊಳ್ಳುವಂತೆ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಟೋಲ್ ಫ್ರಿ ಸಂಖ್ಯೆ 1950 ಮತ್ತು www.ceokarnataka.kar.nic.in ಸಂಪರ್ಕಿಸಬಹುದು.

Edited By : Nirmala Aralikatti
PublicNext

PublicNext

29/11/2020 07:45 am

Cinque Terre

53.4 K

Cinque Terre

3

ಸಂಬಂಧಿತ ಸುದ್ದಿ