ಶಿರಹಟ್ಟಿ: ತಾಲೂಕಾ ಆಡಳಿತ ಹಾಗೂ ತಾಲೂಕ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ಜರುಗಿದ ಕನಕ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶಾಸಕರು ಡೊಳ್ಳು ಬಾರಿಸುವುದರ ಜೊತೆಗೆ ಪಪಂ ಅಧ್ಯಕ್ಷರಾದ ದೇವಕ್ಕ ಗುಡಿಮನಿ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಶಾಸಕರು ಮಾತನಾಡುತ್ತಾ, ಸಂತ ಶ್ರೇಷ್ಠ ಕನಕದಾಸರು ತಮ್ಮ ಜೀವನದುದ್ದಕ್ಕೂ ಭಕ್ತಿ, ತ್ಯಾಗ, ಅಹಿಂಸೆ ಹಾಗೂ ತತ್ವ ಪ್ರೇಮಗಳನ್ನು ತಮ್ಮ ದಾಸ ಸಾಹಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಮೂಡಿಸಿದ್ದಾರೆ ಎಂದರು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹೆಜ್ಜೆ ಮೇಳ ಕುಣಿತದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕುರುಬ ಸಮುದಾಯದ ಮುಖಂಡರು ಮತ್ತು ಊರಿನ ಗುರು ಹಿರಿಯರು, ಯುವಜನರು ಉಪಸ್ಥಿತರಿದ್ದರು.
PublicNext
18/11/2024 05:41 pm