ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಗಳ ಪೈಪೋಟಿ : ವೀಕ್ಷಕರಿಗೆ ಸಕತ್ ಮಜಾ!

ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ಜೋರಾಗಿದೆ. ಕ್ಯಾಪ್ಟನ್ ಆಗೋಕೆ ಭಾರೀ ಮಜವಾಗಿರೋ ಟಾಸ್ಕ್​​ಗಳನ್ನು ಕೊಟ್ಟಿರೋ ಬಿಗ್​ಬಾಸ್ ಪ್ರೇಕ್ಷಕರಿಗೆ ಫುಲ್ ಮನರಂಜನೆ ಕೊಟ್ಟಿದೆ. ಬಿಗ್​ಬಾಸ್ ರಿಯಾಲಿಟಿ ಶೋಗೆ ಟಿವಿಯಲ್ಲಿ ಮಾಮೂಲಿಯಾಗಿ ಪ್ರೇಕ್ಷರ ಕೊರತೆ ಇಲ್ಲ. ಆದರೆ ಒಟಿಟಿ ಎಂದ ಮೇಲೆ ಇದು ನಿರ್ದಿಷ್ಟ ಪ್ರೇಕ್ಷರನ್ನು ಟಾರ್ಗೆಟ್ ಮಾಡುತ್ತದೆ. ಆದರೆ ಕನ್ನಡ ಬಿಗ್​ಬಾಸ್ ಒಟಿಟಿ ನಿರೀಕ್ಷೆಗೂ ಮೀರಿ ಸಖತ್ತಾಗಿ ಸೌಂಡ್ ಮಾಡುತ್ತಿದೆ.

ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಬರುವ ವಾರದ ಸಮಯ ಇದು. ಬಿಗ್ ಬಾಸ್ ಮನೆಯೊಳಗೆ ನಾಯಕನ ಜವಾಬ್ದಾರಿಗಾಗಿ ಪ್ರತಿಬಾರಿ ಸ್ಪರ್ಧಿಗಳು ಸಾಕಷ್ಟು ಪ್ರಯತ್ನ ಮಾಡುವುದನ್ನು ಕಾಣಬಹುದು. ಜಸ್ವಂತ್ ಬೋಪಣ್ಣ ಬಿಗ್ ಬಾಸ್ ಕನ್ನಡ ಒಟಿಟಿನ ಹೊಸ ನಾಯಕನಾಗಲಿದ್ದಾರೆ.

ನಾಯಕತ್ವದ ಟಾಸ್ಕ್​ಗಳೇ ಈ ಬಾರಿಯ ಹೈಲೈಟ್ ಆಗಿದ್ದು, ಅದಕ್ಕಾಗಿ ನೀಡಲಾದ ಟಾಸ್ಕ್ ಅನ್ನು ಜಸ್ವಂತ್ ಹೇಗೆ ನಿಭಾಯಿಸಿದ್ದಾರೆ, ಅದರಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಿಗ್ ಬಾಸ್ ಕನ್ನಡ ಒಟಿಟಿಯ ಮುಂದಿನ ಸಂಚಿಕೆ ನಾಯಕತ್ವದ ಯುದ್ಧವನ್ನು ತೋರಿಸಲಿದ್ದು ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

(ವಿಡಿಯೋ ಕೃಪೆ VOOT)

Edited By : Abhishek Kamoji
PublicNext

PublicNext

20/08/2022 04:59 pm

Cinque Terre

41.98 K

Cinque Terre

0