ಬೆಂಗಳೂರು: ಈ ಬಾರಿಯ ಹೊಸ ವರ್ಷಾಚರಣೆ ಮನೆಯಲ್ಲೆ ಮಾಡಬೇಕು. ಆಕಸ್ಮಾತ್ ರೋಡಿಗಿಳಿದರೆ ಶಿಸ್ತು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ಬಿಬಿಎಂಎಪಿ ಸನ್ನದ್ಧವಾಗಿದೆ.
ಪ್ರತಿ ವರ್ಷ ಹೊಸವರ್ಷವನ್ನು ಢೂಂ ಟಕಾ ಅಂತ ಆಚರಣೆ ಮಾಡ್ತಿದ್ದ ಬೆಂಗಳೂರಿಗರು ಈ ಸಲ ಸೈಲೆಂಟ್ ಆಗಿರ್ಬೇಕು. ಬೆಂಗಳೂರಿನ ಹಾಟ್ ಸ್ಪಾಟ್ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್ಗಳಲ್ಲಿ ಪ್ರತಿ ವರ್ಷ ಕಾಲಿಡೋದಕ್ಕೂ ಜಾಗ ಇರ್ತಿರ್ಲಿಲ್ಲ. ಪಬ್, ಬಾರ್ಗಳಲ್ಲಿ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿಗಳೆಷ್ಟೋ.. ಪಡ್ಡೆ ಹುಡುಗರೆಷ್ಟೋ ಎಂಜಾಯ್ಮೆಂಟ್ ಜೊತೆಗೆ ವರ್ಷವೂ ಅಸಭ್ಯ ವರ್ತನೆಯಿಂದ ಬೆಂಗಳೂರಿನ ಮರ್ಯಾದೆಯನ್ನೂ ದೇಶ ಮಟ್ಟದಲ್ಲಿ ಹರಾಜು ಹಾಕಿದ್ದನ್ನೂ ನೋಡಿದ್ದೇವೆ. ಆದ್ರೆ ಈ ವರ್ಷ ಇದ್ಯಾವುದಕ್ಕೂ ನಿಮಗೆ ಅವಕಾಶವೇ ಇಲ್ಲ.
PublicNext
17/12/2020 06:31 pm