ಮುಂಬೈ: ನನ್ನ ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ. ನನ್ನ ತುಟಿಗೆ ಮುತ್ತಿಟ್ಟು ಪ್ಯಾಂಟ್ ಬಿಚ್ಚಿದ್ದ.ನನಗೆ ಆಗ ಇನ್ನು 17 ವರ್ಷ. ಅಗಲೇ ನಾನು ಬೆಂಗಳೂರಲ್ಲಿಯೇ ಇಂತಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಬಾಲಿವುಡ್ ನಟಿ ಕುಬ್ರಾ ಸೇಠ್ ಈಗ ಹೇಳಿಕೊಂಡಿದ್ದಾರೆ.
ಹೌದು. ನಟಿ ಕುಬ್ರಾ ಸೇಠ್ ತಮ್ಮ ಬದುಕಿನಲ್ಲಿ ಆದ ದೌರ್ಜನ್ಯವನ್ನ ಇತ್ತೀಚಿಗೆ ಬಿಡುಗಡೆಯಾದ "ಓಪ್ ಬುಕ್" ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ನಟನೆ ಜೊತೆಗೆ ಉತ್ತಮ ಬರಹಗಾರ್ತಿನೂ ಆಗಿರೋ ಕುಬ್ರಾ ಸೇಠ್, ತಮಗೆ ತುಂಬಾನೇ ಸಹಾಯ ಮಾಡ್ತಿದ್ದ ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕನೊಬ್ಬ ತಮ್ಮ ಮೇಲೆ ಹೇಗೆಲ್ಲ ಲೈಂಗಿಕ ದೌರ್ಜನ್ಯ ಮಾಡಿದ್ದ ಅನ್ನೋದನ್ನ ಹೇಳಿಕೊಂಡಿದ್ದಾರೆ.
ಅಂಕಲ್ ಎಂದು ನಾನು ಈ ವ್ಯಕ್ತಿಯನ್ನ ಕರೆಯುತ್ತಿದ್ದೆ.
ಈ ವ್ಯಕ್ತಿ ಮನೆಗೂ ಬಂದು ಮುತ್ತಿಟ್ಟು ನನಗೆ ನೀನಂದ್ರೆ ಇಷ್ಟ ಎಂದು ಹೇಳ್ತಿದ್ದ. ಹೋಟೆಲ್ ನಲ್ಲಿ ತುಟಿಗೆ ಚುಂಬಿಸಿ ಪ್ಯಾಂಟ್ ಬಿಚ್ಚಿದ್ದ. ಕಾರ್‌ನಲ್ಲಿ ತೊಡೆ ಸವರಿದ್ದ ಅಂತಲೇ ಬಾಲ್ಯದಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಸತ್ಯವನ್ನ ಎಳೆ..ಎಳೆಯಾಗಿಯೇ ಬಿಚ್ಚಿಟ್ಟಿದ್ದಾರೆ. ಈ ಸತ್ಯ ಈಗ ಭಾರೀ ಚರ್ಚೆ ಆಗುತ್ತಿದೆ.
PublicNext
06/06/2022 01:03 pm