ಮುಂಬೈ: ಹೌದು ಸದ್ಯ ಎಲ್ಲೆಡೆ ನ್ಯಾಷನಲ್ ಕ್ರಶ್ ರಶ್ಮಿಕಾ ಎಂದೇ ಮಿಂಚುತ್ತಿದ್ದಾರೆ. ಬಾಲಿವುಡ್ಗೆ ಎಂಟ್ರಿ ಕೊಟ್ಟಿರೋ ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಬಳಿಕ ರಶ್ಮಿಕಾ ಕ್ರೇಜ್ ಹೆಚ್ಚಾಗಿದೆ. ಉತ್ತರ ಭಾರತದಲ್ಲೂ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರ ಜೊತೆ ನಟಿಸುತ್ತಿರೋ ರಶ್ಮಿಕಾ ಮಂದಣ್ಣ ಗುಡ್‌ಬೈ ಚಿತ್ರದ ಪ್ರಚಾರಕ್ಕಿಳಿದಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟಿ ತನ್ನ ಹಿಂದಿನ ಪಾತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುಡ್ ಬೈ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ 'ಶ್ರೀವಲ್ಲಿ' ರಶ್ಮಿಕಾ ಮಂದಣ್ಣ ಮುಂಬೈನಲ್ಲಿರೋ ಕಾಲೇಜಿಗೆ ಭೇಟಿ ನೀಡಿದ್ದರು. ಟ್ರೇಲರ್ ಬಿಡುಗಡೆಯ ನಂತರ, ವೇದಿಕೆ ಮೇಲೆ ರಶ್ಮಿಕಾ ಬರ್ತಿದ್ದಂತೆ ಅಭಿಮಾನಿಗಳು ರಶ್ಮಿಕಾ, ರಶ್ಮಿಕಾ ಎಂದು ಜೋರಾಗಿ ಕೂಗಿದ್ದಾರೆ.
PublicNext
08/09/2022 08:43 pm