ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್ ತಮ್ಮ ಪ್ರೇಮ ವಿವಾಹದಿಂದಲೇ ಇತ್ತೀಚೆಗೆ ಭಾರಿ ಸುದ್ದಿಯಾದರು. ಅದಕ್ಕೆ ಕಾರಣ ನಟಿ ಮತ್ತು ನಿರ್ಮಾಪಕ ನಡುವಿನ ವ್ಯತ್ಯಾಸ. ಅದೇನೆಂದರೆ, ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಯಿತು.
ಮಹಾಲಕ್ಷ್ಮೀ ಮತ್ತು ರವೀಂದರ್ ಇಬ್ಬರಿಗೂ ಇದು ಎರಡನೇ ಮದುವೆ. ಟ್ರೋಲ್ ಹೊರತಾಗಿಯೂ ಅನೇಕ ಮಂದಿ ನವಜೋಡಿ ಶುಭ ಹಾರೈಸಿದ್ದಾರೆ. ಮದುವೆ ಬಳಿಕ ಇದೀಗ ರವೀಂದರ್ ಮತ್ತು ಮಹಾಲಕ್ಷ್ಮೀ ತಮ್ಮ ಪ್ರೇಮ ವಿವಾಹದ ಕುರಿತು ಕೆಲವು ಆಸಕ್ತಿಕರ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ನಮ್ಮಿಬ್ಬರ ಮದುವೆ ತಮಿಳುನಾಡು ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಬಹಳ ಸದ್ದು ಮಾಡಿದೆ ಮತ್ತು ಅಚ್ಚರಿಯನ್ನು ಉಂಟು ಮಾಡಿದೆ ಎಂದರು. ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ ಮಹಾಲಕ್ಷ್ಮೀ, ರವೀಂದರ್ ಅವರೇ ನನಗೆ ಮೊದಲು ಪ್ರೇಮ ನಿವೇದನೆ ಮಾಡಿದರು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್ ಮಾಡಿದರು. ಮಸೇಜ್ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.
ಅನೇಕ ಮಂದಿ ನಮಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ ಎಂದು ನವದಂಪತಿ ತಿಳಿಸಿದರು. ನಮ್ಮ ಮದುವೆ ಬಗ್ಗೆ ಮನೆಯವರಿಗೆ ಹೇಳಿದಾಗ, ಎರಡೂ ಮನೆಯವರು ಗ್ರೀನ್ ಸಿಗ್ನಲ್ ನೀಡಿದರು. ರವೀಂದರ್ ಮಾತನಾಡಿ, ನಮ್ಮಿಬ್ಬರ ಮದುವೆ ಬಳಿಕ ಬಾಡಿ ಶೇಮಿಂಗ್ ಬಗ್ಗೆ ಪಾಸಿಟಿವ್ ಮತ್ತು ನೆಗಿಟಿವ್ ಕಾಮೆಂಟ್ಗಳ ಬರುತ್ತಿವೆ.
ಬೇರೆಯವರ ಜೀವನ ಅಂತಾ ಬಂದಾಗ ಅದರ ಬಗ್ಗೆ ಮಾತನಾಡುವುದು ಸುಲಭ ಎಂದು ಬೇಸರ ಹೊರಹಾಕಿದರು. ಮಹಾಲಕ್ಷ್ಮೀ ಮಾತನಾಡಿ, ನಾನು ನನ್ನ ಗಂಡನ ಬಗ್ಗೆ ಖುಷಿಯಾಗಿದ್ದೇನೆ. ಬಾಡಿ ಶೇಮಿಂಗ್ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮನಸ್ಸು ನನಗೆ ತುಂಬಾ ಮುಖ್ಯ. ನಾನು ಯಾವುದೇ ಕಾಮೆಂಟ್ ಬಗ್ಗೆ ಯೋಚಿಸುವುದಿಲ್ಲ. ಎಂದು ಹೇಳಿದರು. ಈ ಮದುವೆಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ
PublicNext
04/09/2022 04:38 pm