ಸಿನಿಮಾ ರಂಗಕ್ಕೆ ಕಾಲಿಟ್ಟ ನಂತರದಲ್ಲಿ ಕೆಲ ಕಲಾವಿದರು ನಿರ್ಬಂಧ ಹೇರಿಕೊಂಡಿರುತ್ತಾರೆ. ತಾವು ಹಾಕಿಕೊಂಡ ಚೌಕಟ್ಟನ್ನು ದಾಟಿ ಅವರು ಎಂದಿಗೂ ಹೊರ ಬರುವುದಿಲ್ಲ. ಆದರೆ, ಅನೇಕ ಕಲಾವಿದರು ಸಿಕ್ಕ ಎಲ್ಲಾ ಪಾತ್ರಗಳನ್ನು ಮಾಡಲು ರೆಡಿ ಇರುತ್ತಾರೆ. ಪ್ರಯೋಗಾತ್ಮಕ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಈಗ ಬಾಲಿವುಡ್ನಲ್ಲಿ ‘ಹಡ್ಡಿ’ ಹೆಸರಿನ ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ನ ಸ್ಟಾರ್ ಕಲಾವಿದ ನವಾಜುದ್ದೀನ್ ಸಿದ್ಧಿಕಿ ಅವರು ಹೆಣ್ಣಿನ ಅವತಾರ ತಾಳಿದ್ದಾರೆ. ಸದ್ಯ ಈ ಫೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನವಾಜುದ್ದೀನ್ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳು ಕಳೆದಿವೆ. ಅವರು ಇಲ್ಲಿಯವರೆಗೆ ಹಲವು ಭಿನ್ನ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ಸಿನಿಮಾ ಜತೆಗೆ ‘ಸೇಕ್ರೆಡ್ ಗೇಮ್ಸ್’ ರೀತಿಯ ವೆಬ್ ಸೀರಿಸ್ಗಳ ಮೂಲಕವೂ ಗಮನ ಸೆಳೆದಿದ್ದಾರೆ. ಅವರು ಪ್ರತಿ ಸಿನಿಮಾದಲ್ಲೂ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಈಗ ನವಾಜುದ್ದೀನ್ ಹೊಸ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವರನ್ನು ಮಹಿಳೆಯ ಅವತಾರದಲ್ಲಿ ನೋಡಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
‘ಹಡ್ಡಿ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಬೆಳ್ಳಿ ಬಣ್ಣದ ಡ್ರೆಸ್ ಹಾಕಿದ್ದಾರೆ ನವಾಜುದ್ದೀನ್. ಅವರ ಪಾತ್ರದ ಹೆಸರು ಹಡ್ಡಿ ಎಂಬುದಾಗಿದೆ. ಇದೊಂದು ರಿವೇಂಜ್ ಡ್ರಾಮಾ ಕಥೆ ಆಗಿದೆ. ಜೀ ಸ್ಟುಡಿಯೋಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅಕ್ಷತ್ ಅಜಯ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
PublicNext
23/08/2022 07:58 pm