ಬೆಂಗಳೂರು: ವರನಟ ಡಾಕ್ಟರ್ ರಾಜಕುಮಾರ್ ಅಭಿನಯದ ಭಾಗ್ಯವಂತರು ಚಿತ್ರ ಮತ್ತೆ ರಿಲೀಸ್ ಆಗುತ್ತಿದೆ. ಅಣ್ಣವರಿಗೆ ಬಿ.ಸರೋಜಾ ದೇವಿ ಜೋಡಿಯಾಗಿರೋ ಈ ಚಿತ್ರ ಕನ್ನಡಿಗರ ಮನದಲ್ಲಿ ಈಗಲೂ ವಿಶೇಷ ಜಾಗವನ್ನೇ ಮಾಡಿಕೊಂಡಿದೆ.
ನಿರ್ಮಾಪಕ ದ್ವಾರಕೀಶ್ ನಿರ್ಮಾಣ ಮಾಡಿದ್ದ ಈ ಚಿತ್ರವನ್ನ ಈಗ ಹೊಸ ತಂತ್ರಜ್ಞಾನದೊಂದಿಗೆ ಮುನಿರಾಜು ಎಂಬುವವರು ಇದೇ ಜುಲೈ-08 ರಂದು ರೀರಿಲೀಸ್ ಮಾಡುತ್ತಿದ್ದಾರೆ.
ಭಾಗ್ಯವಂತರು ಸಿನಿಮಾ 1977 ರಲ್ಲಿ ಬೆಳ್ಳಿ ತೆರೆಗೆ ಬಂದಿತ್ತು.ಬರೋಬ್ಬರಿ 45 ವರ್ಷದ ಬಳಿಕ ಈಗ ಈ ಸಿನಿಮಾ ರೀ ರಿಲೀಸ್ ಆಗುತ್ತಿದೆ.7.1 ಡಿಜಿಟಲ್ ಸೌಂಡ್,ಕಲರಿಂಗ್,ಡಿಟಿಎಸ್ ಸೇರಿದಂತೆ ಹೊಸ ಸ್ಪರ್ಶದೊಂದಿಗೆ ಭಾಗ್ಯವಂತರು ಬೆಳ್ಳಿ ಪರದೆಗೆ ಬರ್ತಾಯಿದೆ.
PublicNext
27/06/2022 02:25 pm