ಮುಂಬೈ: ಬಾಲಿವುಡ್‌ನ ಬಹುಭಾಷಾ ಗಾಯಕ ಕೆಕೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರ ನಿಧನದ ಬಳಿಕ ಗಾಯಕರ ವಲಯದಲ್ಲಿ ಒಂದು ಆತಂಕ ಹುಟ್ಟಿಕೊಂಡು ಬಿಟ್ಟಿದೆ.ಅದರಂತೆ ಬಾಲಿವುಡ್ ನ ಮತೋರ್ವ ಗಾಯಕ ಶಾನ್ ಈಗ ಆ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಹೌದು. ಗಾಯಕ ಶಾನ್ ಈಗ ಒಂದು ಸತ್ಯವನ್ನ ಹೇಳಿಕೊಂಡಿದ್ದಾರೆ. ಗಾಯಕ ಕೆಕೆ ನಿಧನದ ಬಳಿಕ "ನನ್ನ ಮಕ್ಕಳು ನನಗೆ ಹೃದಯ ಚಕಪ್ ಮಾಡಿಸಿ " ಅಂತಲೇ ಕೇಳಿಕೊಳ್ಳುತ್ತಿದ್ದಾರೆ. ಗಾಯಕನಾರಿಗೋ ತಮ್ಮ ತಂದೆಗೂ ಹೀಗೇ ಆದರೆ ಹೇಗೆ ಅನ್ನೋ ಆತಂಕವೇ ತಮ್ಮ ಮಕ್ಕಳನ್ನ ಕಾಡುತ್ತಿದೆ. ಅದಕ್ಕೇನೆ ಹೃದಯ ತಪಾಸಣೆಗೆ ನಾನು ಮುಂಬೈಗೆ ಬಂದಿದ್ದೇನೆ ಎಂದು ಗಾಯಕ ಶಾನ್ ಈಗ ಹೇಳಿದ್ದಾರೆ.
40 ವರ್ಷದ ಬಳಿಕ ಪ್ರತಿಯೊಬ್ಬರು ಹೃದಯ ತಪಾಸಣೆ ಮಾಡಿಕೊಳ್ಳಲೇಬೇಕು. ಇನ್ನು ಕೋಟಿ ಕೋಟಿ ಖರ್ಚು ಮಾಡಿಯೇ ಕಾರ್ಯಕ್ರಮ ಮಾಡೋವಾಗ, ಅಲ್ಲಿ ಎಲ್ಲ ವ್ಯವಸ್ಥೆನೂ ಇರಬೇಕು. ಒಂದು ಆಂಬ್ಯುಲೆನ್ಸ್ ಇರಬೇಕು. ಏನಾದರೂ ಎಮರ್ಜನ್ಸಿ ಬಂದ್ರೆ, ಅಲ್ಲಿ ವೈದ್ಯರು ಇರಲೇಬೇಕಾಗುತ್ತದೆ. ಹೀಗೆ ಎಲ್ಲ ವ್ಯವಸ್ಥೆಯನ್ನ ಮಾಡಿಕೊಳ್ಳಬೇಕು ಅಂತಲೇ ಗಾಯಕ ಶಾನ್ ಈಗ ಸಲಹೆವೊಂದನ್ನ ನೀಡಿದ್ದಾರೆ.
PublicNext
11/06/2022 04:19 pm