ಇತ್ತಿಚೆಗೆ ಸಿರೀಯಲ್'ಗಳು ಅಪಾರ ಜನಮನ್ನಣೆಗಳಿಸಿದ್ದು ಕಿರುತೆರೆ ನಟ ನಟಿಯರು ಸಹ ಜನರನ್ನು ಮನರಂಜನೆಗೊಳಿಸಿ ಅಪಾರ ಜನಪ್ರೀಯತೆ ಗಳಿಸುತ್ತಿದ್ದಾರೆ.
ಅದರಲ್ಲೂ ಸಿರೀಯಲ್ ನಟ ನಟಿಯರ ಮನೋಜ್ಞ ನಟನೆ ಕೇವಲ ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯ ವಿದೇಶಿ ಕನ್ನಡಿಗರನ್ನು ತಲುಪುತ್ತಿದ್ದಾರೆ.
ಇದೀಗ ಈ ಸಾಲಿಗೆ ಜೀ ಕನ್ನಡವಾಹಿನಿಯ ಹಿಟ್ಲರ್ ಕಲ್ಯಾಣ ಧಾರವಾಹಿ ವಿಶೇಷ ಎಳೆಯನ್ನಿಟ್ಟುಕೊಂಡು ನೋಡುಗರನ್ನು ರಂಜಿಸುತ್ತಿರುವ ಧಾರಾವಾಹಿ.
ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಎಜೆ ಹಾಗೂ ಲೀಲಾ ಪಾತ್ರ ಎಷ್ಟೂ ಮುಖ್ಯವೋ ಅದೇ ರೀತಿ ಮೂವರು ಸೊಸೆಯಂದಿರ ಕೇಂದ್ರಬಿಂದುವಾಗಿ ಕಥೆ ಸಾಗ್ತಾ ಇದೆ.
ಇದೀಗ ವಿಶೇಷ ಅಂದರೆ ಹಿಟ್ಲರ್‌ನ ಮೂರು ಸೊಸೆಯರಲ್ಲಿ ಕೊನೆಯ ಸೊಸೆ ಪಾತ್ರ ನಿರ್ವಹಿಸುತ್ತಿರುವ ಪದ್ಮಿನಿ ಪಕ್ಕದ ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜೀ ತೆಲುಗು ಕಿರುತೆರೆಯಲ್ಲಿ ಜನಮನಗೆದ್ದ ವೈದೇಹಿ ಪರಿಯನ್ ಎಂಬ ಧಾರಾವಾಹಿಯಲ್ಲಿ ಕನ್ನಡದ ನಟಿ ಪದ್ಮಿನಿಯವರೆ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶದ ಬಾಗಿಲು ತೆರೆದಿದೆ.
PublicNext
18/05/2022 04:28 pm