ದುಬೈ: ಇತ್ತೀಚೆಗೆ ನಟಿ ಕಾರುಣ್ಯ ರಾಮ್ ಶೂಟಿಂಗ್‌ಗೆ ಬ್ರೇಕ್ ನೀಡಿ ದುಬೈ ಪ್ರವಾಸ ಮಾಡಿದ್ದಾರೆ. ಕುಟುಂಬ ಸಮೇತರಾಗಿ ದುಬೈಗೆ ಹಾರಿರುವ ಕಾರುಣ್ಯ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿ ಕಾರುಣ್ಯ ಸಾಕಷ್ಟು ಜನಪ್ರಿಯ ತಾಣಗಳಿಗೂ ಭೇಟಿ ನೀಡುತ್ತಿದ್ದು, ಈ ಬಗ್ಗೆ ಅಪ್‌ಡೇಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿರುವ ಕಾರುಣ್ಯ ದುಬೈನಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಕಾರುಣ್ಯ ಮತ್ತು ಅವರ ಸಹೋದರಿಯ ಕನ್ನಡದ ಹಾಡಿನ ಡ್ಯಾನ್ಸ್‌ಗೆ ನೋಡುಗರು ಫಿದಾ ಆಗಿದ್ದಾರೆ.
ಕೆಲದಿನಗಳ ಹಿಂದೆಯೇ ತಂದೆ ತಾಯಿ ಮತ್ತು ತಂಗಿಯ ಜೊತೆಗೆ ದುಬೈ ಹಾರಿರುವ ಕಾರುಣ್ಯ, ಶಿವರಾಜ್‌ಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಹಿಟ್ ಚಿತ್ರದ ಟಗರು ಬಂತು ಟಗರು ಹಾಡಿಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ದುಬೈ ಪ್ರವಾಸಿಗರ ಸಮ್ಮುಖದಲ್ಲೆ ಕಾರುಣ್ಯ ಮತ್ತು ಸಹೋದರಿ ಸ್ಟೆಪ್ಸ್ ಹಾಕಿದ್ದು, ಎಲ್ಲೋದ್ರು ಕನ್ನಡದ್ದೇ ಹವಾ ಎಂದು ಡೈಲಾಗ್ ಕೂಡ ಹೊಡೆದಿದ್ದಾರೆ. ಅಲ್ಲಿ ಕುಳಿತಿದ್ದವರೆಲ್ಲಾ ಇವರಿಬ್ಬರ ಡ್ಯಾನ್ಸ್‌ಗೆ ಫಿದಾ ಆಗಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.
PublicNext
16/01/2022 10:58 pm