ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಶನಿವಾರ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಎಲಿಮಿನೇಟ್ ಆಗಿದ್ದರು. ಇಂದು ದಿವ್ಯ ಉರುಡುಗ ಮನೆಯಿಂದ ಹೊರ ಬಂದಿದ್ದಾರೆ.
ದಿವ್ಯಾ ಉರುಡುಗ ಅವರು ನಿನ್ನೆ ನಡೆದ ಎಲಿಮಿನೇಷನ್ನಲ್ಲಿ ತಾವೇ ಹೊರಬರುವ ಸ್ಪರ್ಧಿ ಎಂದು ಹೇಳಿಕೊಂಡಿದ್ದರು. ಆದರೆ ವೈಷ್ಣವಿ ಹೊರ ಬರುವ ಮೂಲಕ ಅಚ್ಚರಿಯ ಫಲಿತಾಂಶ ಹೊರ ಬಿದ್ದಿತ್ತು. ಇದೀಗ ಮನೆಯಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಮಾತ್ರ ಉಳಿದುಕೊಂಡಿದ್ದಾರೆ.
ಸದ್ಯ ಪ್ರಶಾಂತ್ ಸಂಬರಗಿ ಟಾಪ್ 5, ವೈಷ್ಣವಿ ಗೌಡ ಟಾಪ್ 4 ಹಾಗೂ ದಿವ್ಯಾ ಉರುಡುಗ ಟಾಪ್ 3 ಸ್ಥಾನ ಪಡೆದಿದ್ದಾರೆ. ಈ ಬಾರಿಯ ಬಿಗ್ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೆಲವೇ ಹೊತ್ತಿನಲ್ಲಿ ತೆರೆಬೀಳಲಿದೆ.
PublicNext
08/08/2021 08:30 pm