ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಚ್ಚುತ್ತಲೇ ಇದೆ 'ಕಾಂತಾರ' ಅಬ್ಬರ: ರೇಟಿಂಗ್‌ನಲ್ಲಿ ದಾಖಲೆಯ ಸರದಾರ

ಇತ್ತೀಚಿನ ವರ್ಷಗಳಲ್ಲಿ ಒಮ್ಮೆ ನೋಡಿ ಬಂದ ಮೇಲೆ ಮತ್ತೊಮ್ಮೆ ನೋಡಬೇಕು ಎಂದೆನಿಸುವ ಸಿನಿಮಾಗಳು ಬರೋದು ತೀರಾ ಅಂದ್ರೆ ತೀರಾ ಕಡಿಮೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ರೀಲ್ಸ್, ಯೂಟ್ಯೂಬರ್‌ಗಳ ಕಾಮಿಡಿ ಸೇರಿ‍ ಅಂತಹ ನೂರಾರು ತಾಣಗಳಿಂದ ಪ್ರೇಕ್ಷಕರನ್ನು ಆಚೆ ತಂದು ಅವರೆಲ್ಲ ಚಿತ್ರಮಂದಿರಕ್ಕೆ ಬರುವಂತೆ ಮಾಡಬೇಕು. ಅದು ಸಾಧ್ಯವಾಗಬೇಕಾದರೆ ಈಗಿನ ದುನಿಯಾದಲ್ಲಿ ರಸವತ್ತಾದ ಕಂಟೆಂಟ್ ಇರುವ ಸಿನಿಮಾ ಬರಬೇಕು. ಅಂತಹ ಪ್ರಯೋಗಶೀಲ ಕತೆ ಮತ್ತದರ ನಿರೂಪಣೆ ಹೊತ್ತ ಸಿನಿಮಾ ಬಂದರೆ ಖಂಡಿತವಾಗಿಯೂ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ.

ಸದ್ಯ ಇದೆಲ್ಲದರಲ್ಲಿ ನಿರ್ದೇಶಕ ಹಾಗೂ ನಟ ವೃಷಭ್ ಶೆಟ್ಟಿ ಸಕ್ಸಸ್ ಆಗಿದ್ದಾರೆ. ಸಿನಿ ವಿಶ್ಲೇಷಕರು ಹಾಗೂ ಬಾಕ್ಸ್ ಆಫೀಸ್ ಪರಿಣತರಿಗೂ ಕೂಡ 'ಕಾಂತಾರ' ವಿಭಿನ್ನವಾಗಿ ನೆಲೆಯಲ್ಲಿ ಕಾಣುತ್ತಿದೆ. ಸಾಧಾರಣವಲ್ಲದ ಸಾಹಸಕ್ಕೆ ಕೈ ಹಾಕಿ ವೃಷಭ್ ಗೆದ್ದಿದ್ದಾರೆ ಎಂಬುದು ಅವರ ಅಂಬೋಣ. ತುಳು ನಾಡಿನ ಸಾಂಸ್ಕೃತಿಕ ಪರಂಪರೆ, ದೈವ ಮತ್ತು ಕೋಲದ ಆಚರಣೆ ಕರಾವಳಿ ಭಾಗದ ಜನರ ನಂಬಿಕೆಯಾಗಿ ಹೇಗೆಲ್ಲ ರೂಢಿಗತವಾಗಿದೆ ಎಂಬುದನ್ನು ವೃಷಭ್ ಶೆಟ್ಟಿ ಸರಳವಾಗಿ ನಿರೂಪಿಸಿದ್ದಾರೆ.

ಇಲ್ಲದವರು ಮತ್ತು ಇದ್ದವರ ನಡುವಿನ ಹೋರಾಟ, ಜಮೀನ್ದಾರನ ಸವಿನಯ ಶೋಷಣೆ, ಅರಣ್ಯಾಧಿಕಾರಿ ಮತ್ತು ನಾಗರಿಕರ ಸಂಘರ್ಷ. ಇದೆಲ್ಲದರ ನಂತರ ಕೊನೆಯಲ್ಲಿ ನಡೆಯುವ ಯುದ್ಧದಲ್ಲಿ ದೈವವೇ ಬಂದು ತುಳಿತಕ್ಕೆ ಒಳಗಾದವರನ್ನು ಕಾಪಾಡುತ್ತದೆ. ಒಟ್ಟಾರೆ ಕತೆಯನ್ನು ಎಲ್ಲ ವರ್ಗದ ಪ್ರೇಕ್ಷಕರಿಗೆ ರುಚಿಸುವಂತೆ ನಿರ್ದೇಶಿಸಿದ್ದಾರೆ ವೃಷಭ್ ಶೆಟ್ಟಿ.

ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿರುವ ಕಾಂತಾರ ಪ್ರತಿಶತಃ 99ರಷ್ಟು ರೇಟಿಂಗ್ ಪಡೆದುಕೊಂಡಿದೆ. ಸದ್ಯ ಕನ್ನಡದ ಯಾವ ಚಿತ್ರವೂ ಇಷ್ಟೊಂದು ರೇಟಿಂಗ್ ಪಡೆದಿಲ್ಲ ಎನ್ನಲಾಗುತ್ತಿದೆ.

Edited By :
PublicNext

PublicNext

06/10/2022 11:04 pm

Cinque Terre

79.3 K

Cinque Terre

5