ಬೈಲಹೊಂಗಲ: ಪಟ್ಟಣದ ವಿದ್ಯಾನಗರದ ನಿವಾಸಿ ನಿಸರ್ಗಾ ಮಲ್ಲೇಶಪ್ಪ ಯರಗುದ್ದಿ 2021-22ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 685 ಅಂಕ ಪಡೆದು ದೇಶದಲ್ಲಿ 611ನೇ rank ಪಡೆದು ಬೈಲಹೊಂಗಲಕ್ಕೆ ಕೀರ್ತಿ ತಂದಿದ್ದಾಳೆ.
ಈಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದು ಎಐಎಂ ಇಂಟಿಗ್ರೆಟೆಡ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 94 ಅಂಕ ಗಳಿಸಿ, ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಪ್ರಾಥಮಿಕ ಹಂತದಿಂದಲೇ ನಿಸರ್ಗಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು,
ತನ್ನ ಯಶಸ್ಸಿಗೆ ಶಿಕ್ಷಕರು, ತಂದೆ- ತಾಯಂದಿರ ಪ್ರೇರಣೆ ಕಾರಣವಾಗಿದೆ. ಮುಂದೆ ಎಂಬಿಬಿಎಸ್ ಮತ್ತು ಎಂಡಿ ಆಗುವ ಕನಸು ಕಂಡಿದ್ದು ವೈದ್ಯಕೀಯ ಸೇವೆಯನ್ನು ಆಯ್ಕೆ ಮಾಡಿಕೊಂಡು ಗ್ರಾಮೀಣ ಭಾಗದ ಜನತೆಗೆ ಸೇವೆ ಮಾಡಲು ಬಯಸಿದ್ದೇನೆ ಎಂದು ತನ್ನ ಇಂಗಿತವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಮಗಳು ನಿಸರ್ಗಾ ದೇಶಕ್ಕೆ 611ನೇ rank ಬಂದಿರುವ ಸುದ್ದಿ ತಿಳಿದು ತಂದೆ ಮಲ್ಲೇಶಪ್ಪ, ತಾಯಿ ಕಲಾವತಿ ಹಾಗೂ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಪಟ್ಟರು.
PublicNext
08/09/2022 10:55 pm