ಪ್ರತಾಪಗಢ: ಯುಪಿಎಸ್ ಸಿ ಪರೀಕ್ಷೆ ಪಾಸು ಮಾಡುವುದೇ ಒಂದು ತಪಸ್ಸು. ಪರೀಕ್ಷೆ ಬರೆಯುವವರೆಲ್ಲ ತೇರ್ಗಡೆಯಾಗುವುದಿಲ್ಲ. ಆದರೆ, ಬಡತನದಲ್ಲೇ ಬೆಳೆದ ಉತ್ತರ ಪ್ರದೇಶದ ಲಾಲ್ ಗಂಜ್ ನ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್ ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಎನ್ನುವುದೇ ಹೆಮ್ಮಯ ಸಂಗತಿ.
ಹೌದು ಯುಪಿಎಸ್ ಸಿ ಪಾಸ್ ಮಾಡಿದ ನಾಲ್ವರಲ್ಲಿ ಮೊದಲನೆಯವರಾದ ಯೋಗೇಶ್ ಮಿಶ್ರಾ ಐಎಎಸ್ ಅಧಿಕಾರಿ. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಲಾಲ್ ಗಂಜ್ ನಲ್ಲಿ ಪೂರ್ಣಗೊಳಿಸಿದರು. ನಂತರ ಮೋತಿಲಾಲ್ ನೆಹರು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮುಗಿಸಿದರು.
2013ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಹಾಗೆಯೇ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅವರ ಸಹೋದರಿ ಕ್ಷಮಾ ಮಿಶ್ರಾ, ಮೊದಲ ಮೂರು ಪ್ರಯತ್ನದಲ್ಲಿ ಸೋತು ನಾಲ್ಕನೇ ಪ್ರಯತ್ನದಲ್ಲಿ ಪಾಸಾಗಿ ಈಗ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂರನೇ ಮಗಳು ಮಾಧುರಿ ಮಿಶ್ರಾ, ಲಾಲ್ ಗಂಜ್ ನ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಅಲಹಾಬಾದ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ. 2014 ರಲ್ಲಿ ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಪಾಸಾಗಿ. ಇದೀಗ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.
ನಾಲ್ಕನೇಯದ್ದಾಗಿ ಲೋಕೇಶ್ ಮಿಶ್ರಾ 2015 ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 44 ನೇ ರ‍್ಯಾಂಕ್ ಪಡೆದಿದ್ದರು. "ಪರಿಸ್ಥಿತಿ ಏನೇ ಇದ್ದರೂ ನನ್ನ ಮಕ್ಕಳ ಶಿಕ್ಷಣದ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ. ಮಕ್ಕಳನ್ನು ಉನ್ನತ ಹುದ್ದೆಯಲ್ಲಿ ನೋಡಲು ಬಯಸಿದ್ದೆ” ಎಂದು ಈ ನಾಲ್ವರ ತಂದೆ ಅನಿಲ್ ಪ್ರಕಾಶ್ ಮಿಶ್ರಾ ಹೇಳಿದ್ದಾರೆ.
PublicNext
19/08/2022 06:17 pm