ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: 'ಅಗ್ನಿಪಥ್‌' ಆಕಾಂಕ್ಷಿಗಳಿಗೆ ಮಾಜಿ ಸೈನಿಕರಿಂದ ತರಬೇತಿ ಸೇವಾ ಕೈಂಕರ್ಯ

ಗದಗ: ಅಗ್ನಿಪಥ್ ಯೋಜನೆಯಡಿ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಯುವಕರಿಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ದೈಹಿಕ ತರಬೇತಿಯ ಅವಶ್ಯಕತೆ ಇರುವುದನ್ನು ಮನಗಂಡು ಮಾಜಿ ಸೈನಿಕರು ದೈಹಿಕ ಸಲಹೆ- ಸೂಚನೆ ಜತೆಗೆ ಸೂಕ್ತ ತರಬೇತಿ ನೀಡಲು ಮುಂದಾಗಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಯುವಕ ಸೋಮೇಶ ಉಪನಾಳ ಅವರ ಪ್ರಾಯೋಜಕತ್ವದಲ್ಲಿ ಐದು ಮಂದಿ ಮಾಜಿ ಸೈನಿಕರಿಂದ ಕಳೆದ 4 ದಿನಗಳಿಂದ ಪಟ್ಟಣದ ಉಮಾ ವಿದ್ಯಾಲಯದ ಮೈದಾನದಲ್ಲಿ ಉತ್ಸಾಹಿ ಯುವಕರಿಗೆ ಉಚಿತ ತರಬೇತಿ ಕೊಡಲಾಗುತ್ತಿದೆ.

ಒಂದು ವಾರ ನಡೆಯುವ ಈ ತರಬೇತಿಗೆ ಸುತ್ತಮುತ್ತಲಿನ ಗ್ರಾಮದಿಂದ ಬಂದ 60 ಯುವಕರು ತರಬೇತಿ ಪಡೆಯುತ್ತಿದ್ದು, ಪ್ರತಿದಿನ ಬೆಳಗ್ಗೆ 7ರಿಂದ 8 ಗಂಟೆವರೆಗೆ ತರಬೇತಿ ನಡೆಯುತ್ತಿದೆ. ಮಾಜಿ ಸೈನಿಕರಾದ ನಿವೃತ್ತ ಮಾಜಿ ಕ್ಯಾಪ್ಟನ್ ಮೃತ್ಯುಂಜಯ ಹಾವೇರಿಮಠ, ಮಾಜಿ ಸುಬೇದಾರ್ ಮೇಜರ್ ಚನ್ನಬಸಪ್ಪ ಹುಡೇದ, ಮಾಜಿ ಸೈನಿಕರಾದ ಅಶೋಕ್ ಪ್ಯಾಟಿ , ಈರಣ್ಣ ಅಣ್ಣಿಗೇರಿ, ಬಸವರಾಜ ಸೂರಣಗಿ ಮತ್ತು ಸಂಚಾಲಕ ಸೋಮೇಶ ಉಪನಾಳ ತರಬೇತಿ ನೀಡುತ್ತಿದ್ದಾರೆ.

Edited By : Nagesh Gaonkar
PublicNext

PublicNext

07/08/2022 04:50 pm

Cinque Terre

34.95 K

Cinque Terre

1