ಬೆಂಗಳೂರು - ದ್ವಿತೀಯ ಪಿಯುಸಿ ಯ ಫಲಿತಾಂಶ ಪ್ರಕಟವಾಗಿದೆ. ಈ ಸಲ ವಿಜ್ಞಾನ ವಿಭಾಗದ ವಿದ್ಯಾರ್ಥಿ ಗಳು ಹೆಚ್ಚಾಗಿ ತೇರ್ಗಡೆ ಆಗಿದ್ದಾರೆ.
ಈ ಕುರಿತು ಮಲ್ಲೇಶ್ವರಂ ಪಿಯು ಬೋರ್ಡ್ ನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.
ಈ ಸಲ ತೇರ್ಗಡೆ ಶೇಕಡಾವಾರು 61.88% ರಷ್ಟು ಇದ್ದು, 6,83,563 ವಿದ್ಯಾರ್ಥಿಗಳು ಹಾಜರಾಗಿದ್ದು, ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದು, 88.02 % ಕೊನೆಯ ಸ್ಥಾನ ಚಿತ್ರದುರ್ಗ 49.31 % ಜಿಲ್ಲೆಯಾಗಿದೆ.
ಹೊಸದಾಗಿ ಪರೀಕ್ಷೆ ಬರೆದವರು 5,99,794:ವಿದ್ಯಾರ್ಥಿಗಳಲ್ಲಿ 4,02,697 ವಿದ್ಯಾರ್ಥಿಗಳ ಪಾಸ್ ಆಗಿದ್ದಾರೆ. ಪುನರಾವರ್ತಿತ 61,838 ರಲ್ಲಿ 14,403 ವಿದ್ಯಾರ್ಥಿಗಳ ತೇರ್ಗಡೆಯಾಗಿದ್ದಾರೆ.
ಖಾಸಗಿ ಅಭ್ಯರ್ಥಿಗಳು 21,931 ವಿದ್ಯಾರ್ಥಿಗಳಲ್ಲಿ 5,866 ಸ್ಟೂಡೆಂಟ್ ಪಾಸ್ ಆಗಿದ್ದಾರೆ.
ಈ ಸಲ ಪಿಯುಸಿಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೇಲುಗೈ ಸಾದಿಸಿದ್ದು, 72.53% ವಾಣಿಜ್ಯ 64.97% ಕಲಾ 48.71 %
1076 ಪರೀಕ್ಷೆ ಕೇಂದ್ರಗಳಲ್ಲಿ 17 691 ಮೌಲ್ಯ ಮಾಪಕರು ಮೌಲ್ಯ ಮಾಪನದಲ್ಲಿ ಭಾಗಿಯಾಗಿದ್ದರು.
PublicNext
18/06/2022 11:53 am