ಬೆಂಗಳೂರು: ಸಾಕಷ್ಟು ನಿರೀಕ್ಷೆಗಳಿದ್ದ 2022ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. 8,53,436 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ. 85.53% ಫಲಿತಾಂಶ ಬಂದಿದೆ. 81.03ರಷ್ಟು ಬಾಲಕರು ಹಾಗೂ ಶೇ. 90.29ರಷ್ಟು ಬಾಲಕಿಯರು ಪಾಸ್ ಆಗುವ ಮೂಲಕ ವಿದ್ಯಾರ್ಥಿನಿಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.
ಲಿಂಗವಾರು ಫಲಿತಾಂಶ
ಹಾಜರು- ಉತ್ತೀರ್ಣ- ಶೇಕಡವಾರು
ಬಾಲಕಿಯರು- 4,12,334- 3,72,278-90.29%
ಬಾಲಕರು-4,41,099- 3,58,602- 81.30%
ಶಾಲಾವಾರು ಫಲಿತಾಂಶ
ಸರ್ಕಾರಿ- 88.0%
ಅನುದಾನಿತ- 87.84%
ಅನುದಾನ ರಹಿತ-92.29%
ನಗರ ಮತ್ತು ಗ್ರಾಮೀಣವಾರು ಫಲಿತಾಂಶ
ನಗರದಲ್ಲಿ - 2,92,946-86.64%
ಗ್ರಾಮೀಣದಲ್ಲಿ -4,28,385- 91.32%
ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿಗಳು
ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಅಂದ್ರೆ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದಿದ್ದಾರೆ. ಹಾಗೇ,
625ಕ್ಕೆ 624 ಅಂಕ ಪಡೆದವರು – 309, 625ಕ್ಕೆ 623 ಅಂಕ ಪಡೆದವರು 472, 622 ಅಂಕ ಪಡೆದವರು 615, 621 ಅಂಕ ಪಡೆದವರು 706, 620 ಅಂಕ ಪಡೆದವರು773 ವಿದ್ಯಾರ್ಥಿಗಳು.
ಇನ್ನು ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಪ್ರಥಮ ಭಾಷೆಯಲ್ಲಿ 19,125 ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 13,458 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 43,126 ವಿದ್ಯಾರ್ಥಿಗಳು, ಗಣಿತದಲ್ಲಿ 13,683 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 6592 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 50,782 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿದ್ದಾರೆ.
ಗ್ರೇಡಿಂಗ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ
ಗ್ರೇಡ್ ಪಡೆದ ವಿದ್ಯಾರ್ಥಿಗಳು ಶೇಕಡಾವಾರು ನೋಡುವುದಾದರೆ
A+ ಗ್ರೇಡ್ ನಲ್ಲಿ1,18,875 ವಿದ್ಯಾರ್ಥಿಗಳು 16.48%, A ಗ್ರೇಡ್ ನಲ್ಲಿ 1,82,600 ವಿದ್ಯಾರ್ಥಿಗಳು 25.31%, B+ ಗ್ರೇಡ್ ನಲ್ಲಿ 1,73,528 ವಿದ್ಯಾರ್ಥಿಗಳು 24.06%, B ಗ್ರೇಡ್ ನಲ್ಲಿ 1,43,900 ವಿದ್ಯಾರ್ಥಿಗಳು 19.95%, C+ ಗ್ರೇಡ್ ನಲ್ಲಿ 87,801 ವಿದ್ಯಾರ್ಥಿಗಳು 12.17%, C ಗ್ರೇಡ್ ನಲ್ಲಿ 14,627 ವಿದ್ಯಾರ್ಥಿಗಳು 2.03% ಪಡೆದಿದ್ದಾರೆ.
ಅಂದಹಾಗೆ 2019-20ನೇ ಸಾಲಿನಿಂದಲೇ ರ್ಯಾಂಕ್ ಬದಲಿಗೆ ಗ್ರೇಡ್ ನೀಡುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಈ ವರ್ಷವೂ ಗ್ರೇಡ್ ನೀಡಲಾಗಿದೆ. ಈ ಸಲ ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ. ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿ ಸ್ನೇಹಿಯಾಗಿತ್ತು. ಶೇ.10 ಮಾತ್ರ ಕಠಿಣ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ನೀಡಲಾಗಿದ್ದು, ಶೇ. 10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ. 35,931 ವಿದ್ಯಾರ್ಥಿಗಳಿಗೆ ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ. 3,940 ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.ಪೂರಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಜೂನ್ 27ರಿಂದ ಜುಲೈ 4ರವರೆಗೆ ನಡೆಯಲಿದೆ ಎಂದು ನಾಗೇಶ್ ಮಾಹಿತಿ ನೀಡಿದರು.
ಇನ್ನೂ ಮಧ್ಯಾಹ್ನ 1 ಗಂಟೆಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, https://karresults.nic.in/ ಮೂಲಕ ನೋಡಬಹುದಾಗಿದೆ.
PublicNext
19/05/2022 09:37 pm