ಮೈಸೂರು: ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ. ಚೀನಾದಲ್ಲಿ ಕೊರೊನಾ ಹಾವಳಿ.ಇವರೆಡೂ ದೇಶದಲ್ಲಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಆಗ ತತ್ತರಿಸಿ ಹೋದ್ರು. ಶಿಕ್ಷಣವನ್ನ ಬಿಟ್ಟು ಅಲ್ಲಿಂದ ಇಲ್ಲಿಗೆ ವಾಪಾಸ್ ಬಂದೇ ಬಿಟ್ಟರು. ಇಂತಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈಗ ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜು ಒಂದ್ ಒಳ್ಳೆ ಅವಕಾಶ ಮಾಡಿಕೊಡ್ತಾಯಿದೆ.
ಹೌದು.ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಈಗ ಬ್ರಿಡ್ಜ್ ಕೋರ್ಸ್ ವೊಂದನ್ನ ಘೋಷಿಸಿದೆ. ಬ್ರಿಡ್ಜ್ ಕೋರ್ಸ್ ಅನೌನ್ಸ್ ಆಗಿದ್ದೇ ತಡ, ವೈದ್ಯಕೀಯ ವಿದ್ಯಾರ್ಥಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬ್ರಿಡ್ಜ್ ಕೋರ್ಸ್ ಸೇರಲು 511 ವಿದ್ಯಾರ್ಥಿಗಳು ಈ ಕೋರ್ಸ್ ಸೇರಲು ಉತ್ಸುಕರಾಗಿದ್ದಾರೆ. ಹೀಗೆ ಬ್ರಿಡ್ಜ್ ಕೋರ್ಸ್ ಸೇರಲು ಇಷ್ಟಪಟ್ಟವರಲ್ಲಿ 321 ಕರ್ನಾಟಕದ ವಿದ್ಯಾರ್ಥಿಗಲೇ ಆಗಿರೋದು ವಿಶೇಷ. ಇನ್ನು ಈ ಕೋರ್ಸ್ ಮೇ ತಿಂಗಳ ಎರಡನೇ ವಾರದಿಂದಲೇ ಆರಂಭಿಸೋ ನಿರೀಕ್ಷೆ ಇದೆ.
PublicNext
02/05/2022 03:56 pm