ವಿಜಯಪುರ: ಎಸ್ಎಸ್ಎಲ್ಸಿ ಪರೀಕ್ಷಾರ್ಥಿಯೋರ್ವ ತನನ್ನು ಪಾಸ್ ಮಾಡುವಂತೆ ಮೌಲ್ಯಮಾಪಕರಿಗೆ ವಿಶೇಷ ಮನವಿ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯಪುರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದ್ದ ಮೌಲ್ಯಮಾಪನದ ವೇಳೆ ವಿಶೇಷ ಮನವಿಯು ಉತ್ತರ ಪತ್ರಿಕೆಯಲ್ಲಿ ಕಂಡುಬಂದಿದೆ.
ಪತ್ರದಲ್ಲಿ ಏನಿದೆ?:
ಮೌಲ್ಯಮಾಪನ ನೋಡುತ್ತಿರುವ ನನ್ನ ಉಪಧ್ಯಾಯರಿಗೆ ನಿಮಗೆ ನನ್ನ ಸಾಷ್ಟಾಂಗ ಸಮಸ್ಕಾರಗಳು. ಏನೆಂದರೆ ನಾನೂ ಗ್ರಾಮ ಪಂಚಾಯಿತಿಯಲ್ಲಿ ನೀರು ಗಂಟೆ (ವಾಟರ್ ಮ್ಯಾನ್)ಆಗಿ ಸುಮಾರು 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಮುಂಬಡ್ತಿ ಇರುವುದರಿಂದ ಈ ಒಂದು ಪೇಪರ್ ಮೇಲೆ ನಿಂತಿದೆ. ಇದೊಂದನ್ನ ನನಗೆ ನಿಮ್ಮ ಒಳ್ಳೆಯ ಮನಸ್ಸಿನಿಂದ ನನ್ನನ್ನು ಪಾಸ್ ಮಾಡಿ ಕೊಡಿ. ನಮಗೆ ದೇವರು ಬಳ್ಳೆಯದು ಮಾಡುತ್ತಾನೆ. ನಾನೀಗ ಬಿಲ್ ಕಲೆಕ್ಟರ್ ಆಗುವ ಸಾಧ್ಯತೆರ ಇದೆ. ನಿಮ್ಮಿಂದ ನನಗೆ ಅನ್ನ ಸಿಕ್ಕಿದಂತ್ತಾಗುತ್ತದೆ. ಉತ್ತೀರ್ಣ ಮಾಡಿ ಕೊಡಿ. ನನಗೆ ಇದೊಂದೆ ಪಾಸ್ ಆಗ ಬೇಕಾಗಿರುವುದು ಇಂತಿ ನಿಮ್ಮ ವಿದ್ಯಾರ್ಥಿ.
PublicNext
29/04/2022 06:20 pm