ಸೋಮವಾರದಿಂದ SSLC ಪರೀಕ್ಷೆ ಆರಂಭವಾಗುತ್ತಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೊಡುವ ಹಟ ಬಿಟ್ಟು ಪರೀಕ್ಷೆಗೆ ಹಾಜರಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬುದ್ಧಿವಾದ ಹೇಳಿದ್ದಾರೆ.
ಒಂದು ವೇಳೆ ಮಕ್ಕಳು ಹಟ ಹಿಡಿದರೂ ಅವರ ಪೋಷಕರು, ಧರ್ಮಗುರುಗಳು, ಶಿಕ್ಷಕರು ತಿಳಿ ಹೇಳಿ ಪರೀಕ್ಷೆಗೆ ಕಳುಹಿಸಬೇಕು. ಪರೀಕ್ಷೆಗೆ ಸಮವಸ್ತ್ರ ಮಾತ್ರ ಧರಿಸಿ ಬರುವಂತೆ ಶಿಕ್ಷಣ ಇಲಾಖೆ ಆದೇಶಿಸಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಮಕ್ಕಳು ಪರೀಕ್ಷೆ ಸಂದರ್ಭದಲ್ಲಿ ಮೊಂಡುತನ ಮಾಡುವುದು ಸರಿಯಲ್ಲ ಎಂದಿದ್ದಾರಂತೆ.
ಕೆಟ್ಟ ಮೇಲೆ ಬುದ್ಧಿ ಬಂತು ಎಂಬುವಂತೆ ಹಜಾಬ್ ವಿವಾದ ಈ ತಮ್ಮ ಬುಡಕ್ಕೆ ಬಂದಿದೆ ಎಂದು ಗೊತ್ತಾಗುತ್ತಲೇ ಈಗ ಬುದ್ದಿವಾದ ಹೇಳಲು ಹೊರಟಿದ್ದಾರೆ. ಉಡುಪಿಯಲ್ಲಿ ಆರಂಭವಾದಾಗಲೇ ಈ ಮಾತು ಹೇಳಿದ್ದರೆ ಅಥವಾ ಕೋರ್ಟ್ ತೀರ್ಪು ಬಂದಾಗಲಾದರೂ ಎಚ್ಚೆತ್ತುಕೊಂಡಿದ್ದರೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬರುತ್ತಿರಲಿಲ್ಲ.
ಪರೀಕ್ಷೆಯಿಂದ ವಂಚಿತರಾದರೆ ಭವಿಷ್ಯದ ಮೇಲಾಗುವ ಪರಿಣಾಮವನ್ನು ಪಾಲಕರು ಹಾಗೂ ಧರ್ಮಗುರುಗಳು ಮನದಟ್ಟು ಮಾಡಿಕೊಟ್ಟು ಪರೀಕ್ಷೆಗೆ ಕಳುಹಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಇಡೀ ವರ್ಷ ಮಕ್ಕಳು ಮಾಡಿದ ವಿದ್ಯಾಭ್ಯಾಸ ವ್ಯರ್ಥವಾಗಲಿದೆ. ಜತೆಗೆ ಸರ್ಕಾರವೂ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಎಂದು ಹೇಳಿದರು.
ಹಿಜಾಬ್ ವಿಚಾರವಾಗಿ ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ, ಕೆಲವರು ಒಪ್ಪುವುದಿಲ್ಲ. ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ಹೇಳೋಕೆ ನಾನು ಸಿದ್ಧವಿಲ್ಲ ಎಂದೂ ಹೇಳಿದ್ದಾರಂತೆ.
PublicNext
27/03/2022 01:35 pm