ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಬೆಂಗಳೂರು : ರಷ್ಯಾ-ಉಕ್ರೇನ್ ಯುದ್ದದಿಂದಾಗಿ ರಾಜ್ಯದ ಅನೇಕ ವಿದ್ಯಾರ್ಥಿಗಳು ಮರಳಿ ಬಂದಿದ್ದಾರೆ. ಹೀಗೆ ಬಂದವರಿಗೆ ನಮ್ಮ ಶಿಕ್ಷಣ ಮುಂದೆ ಹೇಗೆ ಎಂದು ಚಿಂತೆಯಲ್ಲಿದ್ದರು. ಸದ್ಯ ಈ ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಮಾಧಾನದ ಸುದ್ದಿವೊಂದನ್ನು ನೀಡಿದ್ದಾರೆ. ಉಕ್ರೇನ್ ನಿಂದ ಕರ್ನಾಟಕಕ್ಕೆ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಪಾಸ್ಸಾಗಿದ್ದಾರೆ ಅವರ ಜೊತೆ ಸಭೆ ನಡೆಸುವಂತೆ ಸಿಎಂ ಹೇಳಿದ್ದರು.

ಈ ಕುರಿತು ಇಂದು ಸಭೆ ನಡೆಸಿದ ಸಚಿವರು ಉಕ್ರೇನ್ ನಿಂದ ಬಂದಿರುವ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆ ಮುಂದುವರಿಸಬಹುದು. ವಿದ್ಯಾರ್ಥಿಗಳು ಇರುವ ಜಿಲ್ಲೆಗಳಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ಕೊಡಲಿದೆ. ಇದನ್ನ ನಾವು ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಕಾಲೇಜುಗಳಲ್ಲಿ ಅವರ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ತಾತ್ಕಾಲಿಕ ಅವಕಾಶ ಮಾಡಿಕೊಡುತ್ತೇವೆ. ಎಲ್ಲವೂ ಉಚಿತವಾಗಿರುತ್ತದೆ. ಈ ವಿದ್ಯಾರ್ಥಿಗಳು ಕಲಿಕೆಗೆ ಶುಲ್ಕ ಕೊಡಬೇಕಾಗಿಲ್ಲ ಸಮಿತಿ ವರದಿ ಬಂದ ಬಳಿಕ ಶಾಶ್ವತ ಪರಿಹಾರ ನೀಡುತ್ತೆವೆ ಎಂದರು.

Edited By : Nirmala Aralikatti
PublicNext

PublicNext

21/03/2022 08:21 pm

Cinque Terre

64.34 K

Cinque Terre

31