ಬೆಳಗಾವಿ: ಭಾರತ ದೇಶ ಹಳ್ಳಿಗಳ ದೇಶ. ಆಧುನಿಕತೆಯ ಪ್ರಭಾವದಿಂದ ಹಳ್ಳಿ ಕಲ್ಪನೆ ಮತ್ತು ಹಳ್ಳಿಯ ಸೊಗಡು ಮರೆತೇ ಹೋಗಿದೆ.ಆದರೆ ಇಲ್ಲೊಂದು ಶಾಲೆ ಇದೆ. ಇಲ್ಲಿ ಆ ಹಳ್ಳಿಯ ನೆನಪುಗಳು ಮತ್ತೆ ಜೀವಂತ ಆಗಿವೆ. ಹೇಗಂತಿರೋ. ಬನ್ನಿ, ನೋಡೊಣ.
ಹಳ್ಳಿಯಲ್ಲಿ ಸಿಗುವಂತಹ ನೆಮ್ಮದಿ, ಸಂತೋಷ ಎಷ್ಟೇ ಹಣ ನೀಡಿದರು ಸಿಗಲು ಸಾಧ್ಯವಿಲ್ಲ. ಅಲ್ಲಿಯ ಊಟೋಪಚಾರ ಎಂತಹ ಸ್ಟಾರ್ ಹೊಟೇಲ್ ನಲ್ಲಿಯೂ ತಯಾರಿಸಲು ಸಾಧ್ಯವಿಲ್ಲ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ, ಹಳ್ಳಿಯ ಸೊಗುಡು, ಸನ್ನಿವೇಶಗಳಿಗೆ ಆ ಶಾಲೆಯ ಶಿಕ್ಷಕರೊಬ್ಬರು ಮರು ಜೀವವನ್ನು ನೀಡಿದ್ದಾರೆ.
ಹಳ್ಳಿಯಲ್ಲಿ ಧರಿಸುವಂತಹ ಪ್ರತಿಯೊಂದು ಉಡುಪು ಮತ್ತು ಸನ್ನಿವೇಶಗಳನ್ನು ಮರು ಸೃಷ್ಟಿ ಮಾಡಿರುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಅದಕ್ಕೆ ತಕ್ಕನಾಗಿಯೇ ವಿದ್ಯಾರ್ಥಿಗಳು ವಿವಿಧ ಉಡುಪುಗಳನ್ನು ಧರಿಸುವುದು ಒಂದು ಗ್ರಾಮೀಣ ಭಾಗಕ್ಕೆ ಹೋಗಿ ಬಂದಂತೆಯೇ ಭಾಸವಾಗಿದೆ.
ಅದೇ ರೀತಿ ದೇಶವೇ ಹಳ್ಳಿಗಳಿಂದ ಆವರಿಸಿರುವಾಗ ಗ್ರಾಮೀಣ ಭಾಗದ ಎಲ್ಲ ಕಲೆಗಳನ್ನು ಮಾಸಿ ಹೋಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಕ್ಕಳಿಂದ ಸೊಗಡನ್ನು ಮರು ಸೃಷ್ಟಿ ಮಾಡಿದ ಶಿಕ್ಷಕರಿಗೆ ಹ್ಯಾಟ್ಸಾಫ್ ಹೇಳಲೆಬೇಕು.
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್
PublicNext
04/03/2022 02:38 pm