ಹೊಸದಿಲ್ಲಿ: ಜ.6ರೊಳಗೆ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಭರವಸೆ ಕೊಟ್ಟಿದ್ದಾರೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಸತತ ಎರಡು ವಾರಗಳ ಕಾಲ ನಡೆದ ವಸತಿ ವೈದ್ಯರ ಹೋರಾಟವನ್ನು ಕೈಬಿಡಲಾಗಿದೆ. “ನೀಟ್-ಪಿಜಿ ಕೌನ್ಸೆಲಿಂಗ್ ನ್ನು ಜ.6ರೊಳಗೆ ನಡೆಸಲಾಗುವುದು.
ಪ್ರತಿಭಟಿಸಿದ ವೈದ್ಯರ ಮೇಲೆ ಎಫ್ ಐಆರ್ ಹಾಕಲಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಐಎಂಎ ಅಧ್ಯಕ್ಷ ಸಹಜಾನಂದ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.
PublicNext
01/01/2022 03:00 pm