ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಅ.25ಕ್ಕೆ 1 ರಿಂದ 5 ಶಾಲೆ ಶುರು

ಬೆಂಗಳೂರು : ಕೋವಿಡ್ ನಿಂದ ಶಾಲೆಯ ಮುಖ ನೋಡದ ಮಕ್ಕಳಿಗೆ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ.

ಶಾಲೆಗಳ ಆರಂಭಕ್ಕೆ ಸರಕಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದು, ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯವಾಗಿರಬೇಕು.

ಶಿಕ್ಷಕರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದಿರಬೇಕು.

ತರಗತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.

ಶಾಲೆಗೆ ಹಾಜರಾಗುವುದು ಮಕ್ಕಳಿಗೆ ಕಡ್ಡಾಯವಾಗಿರುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ತರಗತಿಯಲ್ಲಿ 50 % ಮಾತ್ರ ವಿದ್ಯಾರ್ಥಿಗಳು ಹಾಜರಿರಬೇಕು, 1 ಮೀಟರ್ ದೈಹಿಕ ಅಂತರ ಕಾಪಾಡುವುದು ಅಗತ್ಯ ಎಂದು ಮಾರ್ಗ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Edited By : Nirmala Aralikatti
PublicNext

PublicNext

18/10/2021 05:09 pm

Cinque Terre

35.58 K

Cinque Terre

0